ಕೆಎನ್ಎನ್ ಟಿಜಿಡಲ್ ಡೆಸ್ಕ್ : ಇಂದು ಬೆಳಗ್ಗೆ ಅಸ್ಸಾಂ-ಮೇಘಾಲಯ ಗಡಿಯಲ್ಲಿ ಮರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್ ಅನ್ನು ಪೊಲೀಸರು ತಡೆದ ನಂತರ ನಡೆದ ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಮೊಯಿಕ್ರಾಂಗ್ನಲ್ಲಿ ಮೇಘಾಲಯದ ಗಡಿಯಲ್ಲಿ ಅಸ್ಸಾಂ ಅರಣ್ಯ ಇಲಾಖೆಯ ತಂಡ ಮುಂಜಾನೆ 3 ಗಂಟೆ ಸುಮಾರಿಗೆ ಟ್ರಕ್ ಅನ್ನು ತಡೆದಿದೆ. ಈ ವೇಳೆ ಟ್ರಕ್ ನಲ್ಲಿದ್ದವರು ಪರಾರಿಯಾಗಲು ಪ್ರಯತ್ನಿಸಿದ್ದರು. ಇವರನ್ನು ಬೆನ್ನಟಿದ ಅರಣ್ಯ ಸಿಬ್ಬಂದಿ ವಾಹನಕ್ಕೆ ಗುಂಡು ಹಾರಿಸಿ ಟೈರ್ ಪಂಕ್ಚರ್ ಮಾಡಿದ್ದಾರೆ.
ಬಳಿಕ ಟ್ರಕ್ ಡ್ರೈವರ್, ಹ್ಯಾಂಡ್ಮ್ಯಾನ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಅರಣ್ಯ ಸಿಬ್ಬಂದಿ ಬಂಧಿಸಿ ಜಿರಿಕೆಂಡಿಂಗ್ ಪೊಲೀಸ್ ಠಾಣೆಗೆ ಕರೆದೋಯ್ದಿದ್ದಾರೆ ಎನ್ನಲಾಗುತ್ತಿದೆ.
ಮೇಘಾಲಯದಿಂದ ‘ಡಾವೋ’ (ಕಠಾರಿ) ಮತ್ತು ಇತರ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾದ ಅಪಾರ ಸಂಖ್ಯೆಯ ಜನರು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಸ್ಥಳದಲ್ಲಿ ಜಮಾಯಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದು, ಅರಣ್ಯ ಸಿಬ್ಬಂದಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೃತ ಅರಣ್ಯ ಸಿಬ್ಬಂದಿಯನ್ನು ಬಿದ್ಯಾ ಸಿಂಗ್ ಲೆಹ್ತೆ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಅರಣ್ಯ ಸಿಬ್ಬಂದಿ ಅಭಿಮನ್ಯು ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಅರಣ್ಯ ಗೃಹರಕ್ಷಕ ದಳದ ಸಿಬ್ಬಂದಿ ಮತ್ತು ಖಾಸಿ ಸಮುದಾಯದ ಮೂವರು ಸಾವನ್ನಪ್ಪಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
BIG NEWS: ಅನುಕಂಪದ ಆಧಾರದ ಉದ್ಯೋಗ ಪಡೆಯಲು ದತ್ತು ಮತ್ತು ಜೈವಿಕ ಮಗುವಿನ ನಡುವೆ ಯಾವುದೇ ಭೇದವಿಲ್ಲ: ಹೈಕೋರ್ಟ್
BREAKING NEWS : ಭಾರತದೊಂದಿಗೆ ‘ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ ಆಸ್ಟ್ರೇಲಿಯಾ ಅನುಮೋದನೆ |Free Trade Agreement