ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಅಮಿತ್ ಶಾ ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,ಕರ್ನಾಟಕ ಹಾಲು ಉತ್ಪಾದನೆ ಯಶಸ್ಸು ಕಂಡಿದ್ದೆ.ಮನೆಯಲ್ಲಿ ಹಾಲು ಕರೆದು ಹಾಕುವ ಮಹಿಳೆಯರಿಗೆ ಧನ್ಯವಾದಗಳನ್ನು ಸಿಎಂ ತಿಳಿಸಿದ್ದಾರೆ.
BREAKING NEWS: ಮಂಡ್ಯದ ಗೆಜ್ಜಲಗೆರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಮೆಗಾ ಡೈರಿ ಉದ್ಘಾಟನೆ’
ಕರ್ನಾಟಕದಲ್ಲಿ ಹಾಲು ಉತ್ಪಾದನೆ ಮೂಲಕ ಸಮಗ್ರ ಅಭೀವೃದ್ಧಿ ತರಲಾಗಿದೆ. ಕರ್ನಾಟಕದಲ್ಲಿ ಕ್ಷೀರ ಕ್ರಾಂತಿ ಆಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಉದ್ಘಾಟನೆ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ದೇಶದಲ್ಲಿ ಸಹಕಾರ ಸಂಘಕ್ಕೆ ಶಕ್ತಿ ತುಂಬವ ಕ್ರಾಂತಿ ಆಗಲಿದೆ. ದೇವೇಗೌಡರು ಬೆಂಗಳೂರಿನಲ್ಲಿ ಮೆಗಾ ಡೇರಿ ಆರಂಭಕ್ಕೆ ಕಾರಣರಾಗಿದ್ದಾರೆ. ಅಲ್ಲಿಂದ ಇಂದು ಎಲ್ಲಾ ಕಡೆಗಳಲ್ಲೂ ಮೆಗಾ ಡೇರಿ ಆಗುತ್ತಿದೆ ಎಂದರು . ಆತ್ಮನಿರ್ಭರ್ ಭಾರತಕ್ಕೆ ಕರ್ನಾಟಕ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಹೇಳಿದ್ದಾರೆ.
BREAKING NEWS: ಮಂಡ್ಯದ ಗೆಜ್ಜಲಗೆರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಮೆಗಾ ಡೈರಿ ಉದ್ಘಾಟನೆ’
ಸಮಗ್ರ ಕೃಷಿಯಲ್ಲಿ ಹೈನುಗಾರಿಕೆಯೂ ಪ್ರಮುಖವಾಗಿದೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಮೂಲ ಸೌಕರ್ಯ ಅವಶ್ಯಕತೆ ಇದೆ. ಕೈಗಾರಿಕೆ ಮತ್ತು ನೀರಾವರಿ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಮಂಡ್ಯ ಮೈಶುಗರ್ ಪ್ರಾರಂಭವಾಗಿದೆ. ಮುಂದಿನ ವರ್ಷ ಎತನಾಲ್ ಪ್ರಾರಂಭ ಮಾಡ್ತೇವೆ. ರೈತರಿಗೆ ಮತ್ತಷ್ಟು ಅನುಕೂಲವಾಗುವ ರೀತಿ ಕಾರ್ಯಕ್ರಮ ಕೊಡ್ತೇವೆ ಎಂದು ಸಿಎಂ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದಾರೆ.