ಕಲಬುರಗಿ : ತಾಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿ ಮಾರಮ್ಮನ ದೇವಿ ಜಾತ್ರೆಯಲ್ಲಿ ಸಿಡಿ ಮದ್ದು ಸ್ಪೋಟಗೊಂಡು 15 ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಲಬುರಗಿ ಮಾರಮ್ಮನ ದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವಿತ್ತು.
ಜಾತ್ರೆ ಹಿನ್ನೆಲೆ ಗ್ರಾಮಸ್ಥರು ಮದ್ದು ಸುಡೋರನ್ನು ಕರೆಸಿದ್ದರು ಮೇಲೆ ಹಾರಿಸಿದ್ದ ಮದ್ದು ಗ್ರೀನ್ ಮ್ಯಾಟ್ ಮೃಲೆ ಬಡಿದು ಅವಘಟ ಸಂಭವಿಸಿದೆ. ಘಟನೆಯಲ್ಲಿ 15 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, 8 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಕಲಬುರಗಿಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಪ್ರಕರಣ : ಶ್ರೀಮಂತರ ಮನೆಗೆ ಕನ್ನ ಹಾಕಿ ದಾನ ದರ್ಮ ಮಾಡ್ತಿದ್ದ ‘ಕಳ್ಳ’ ಅರೆಸ್ಟ್