ನವದೆಹಲಿ: ಇರಾನ್ ಮತ್ತು ಇಸ್ರೇಲ್ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಸಚಿವಾಲಯ (ಎಂಇಎ) ಪ್ರಯಾಣ ಸಲಹೆ ನೀಡಿದೆ. ಈ ದೇಶಗಳಲ್ಲಿ ಈಗಾಗಲೇ ಇರುವ ಭಾರತೀಯರು ತಮ್ಮ ಸುರಕ್ಷತೆಗಾಗಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಅವರ ಚಲನವಲನಗಳನ್ನು ಮಿತಿಗೊಳಿಸುವಂತೆ ಮನವಿಮಾಡಿದೆ.
ಉಭಯ ದೇಶಗಳಲ್ಲಿನ ಭಾರತೀಯರು ತಮ್ಮ ಸುರಕ್ಷತೆಯ ಬಗ್ಗೆ ಅತ್ಯಂತ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಮತ್ತು ಅವರ ಚಲನವಲನಗಳನ್ನು ಕನಿಷ್ಠಕ್ಕೆ ಸೀಮಿತಗೊಳಿಸಬೇಕು ಎಂದು ತಿಳಿಸಿದೆ.
ಏಪ್ರಿಲ್ 1 ರಂದು ಸಿರಿಯಾದಲ್ಲಿನ ಇರಾನಿನ ದೂತಾವಾಸದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಜನರಲ್ಗಳು ಸೇರಿದಂತೆ ಏಳು ರೆವಲ್ಯೂಷನರಿ ಗಾರ್ಡ್ಗಳು ಸಾವನ್ನಪ್ಪಿದ ನಂತರ ಇಸ್ರೇಲ್ ವಿರುದ್ಧ ಪ್ರತೀಕಾರದ ಬೆದರಿಕೆ ಹಾಕಿದೆ, ಇದು ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ಉಲ್ಬಣಗೊಳ್ಳುವ ಭೀತಿಯನ್ನು ಹುಟ್ಟುಹಾಕಿದೆ.
Travel advisory for Iran and Israel:https://t.co/OuHPVQfyVp pic.twitter.com/eDMRM771dC
— Randhir Jaiswal (@MEAIndia) April 12, 2024