ಉತ್ತರಪ್ರದೇಶ : ಮಥುರಾದ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದೇಶ 7ರ ನಿಯಮ 11ಕ್ಕೆ ಆಕ್ಷೇಪಿಸಿ ಮುಸ್ಲಿಂ ಪರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರಿದ್ದ ಏಕ ಪೀಠ ಈ ತೀರ್ಪು ನೀಡಿದೆ.
ಹೌದು ಇಂದು ಅಲಹಾಬಾದ್ ಹೈಕೋರ್ಟ್ ನಲ್ಲಿ ನಡೆದ ಮಥುರಾದ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಟ್, ಆದೇಶ 7ರ ನಿಯಮ 11ಕ್ಕೆ ಆಕ್ಷೇಪಿಸಿ ಮುಸ್ಲಿಂ ಪರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರಿದ್ದ ಏಕ ಪೀಠ ಈ ತೀರ್ಪು ನೀಡಿದೆ.
ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ನಿರ್ವಹಣೆಯನ್ನು ಮುಸ್ಲಿಂ ಕಡೆಯವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಇದೆ ವೇಳೆ ಸಿವಿಲ್ ಮೊಕದ್ದಮೆಯ ನಿರ್ವಹಣೆಗೆ ಸಂಬಂಧಿಸಿದಂತೆ ಹಿಂದೂ ಕಡೆಯ ಅರ್ಜಿಗಳನ್ನು ಹೈಕೋರ್ಟ್ ಸ್ವೀಕರಿಸಿತು.
2020 ರಲ್ಲಿ, ವಕೀಲ ರಂಜನಾ ಅಗ್ನಿಹೋತ್ರಿ ಮತ್ತು ಇತರ ಏಳು ಪಕ್ಷಗಳು ಜಂಟಿಯಾಗಿ ಮಥುರಾ ಸಿವಿಲ್ ಕೋರ್ಟ್‌ನಲ್ಲಿ ಈ ಪ್ರಕರಣವನ್ನು ದಾಖಲಿಸಿದ್ದವು ಎಂಬುದು ಗಮನಾರ್ಹ. ಈ ಅರ್ಜಿಯನ್ನು ಆರಂಭದಲ್ಲಿ ಸಿವಿಲ್ ನ್ಯಾಯಾಲಯವು ತಿರಸ್ಕರಿಸಿತು, ಆದರೆ ನಂತರ ಜಿಲ್ಲಾ ನ್ಯಾಯಾಲಯವು ಅದನ್ನು ನಿರ್ವಹಿಸಬಲ್ಲದು ಎಂದು ಪರಿಗಣಿಸಿತು.
ಎರಡೂವರೆ ವರ್ಷಗಳ ನಂತರ, ಅದೇ ನ್ಯಾಯಾಲಯದಲ್ಲಿ ಹೆಚ್ಚುವರಿ 17 ಅರ್ಜಿಗಳನ್ನು ಸಲ್ಲಿಸಲಾಯಿತು. ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿಯೇ ವಿವಿಧ ಕೆಳ ನ್ಯಾಯಾಲಯಗಳು ಈ ಅರ್ಜಿಗಳನ್ನು ವಿವಿಧ ಹಂತಗಳಲ್ಲಿ ವಿಚಾರಣೆ ನಡೆಸುತ್ತಿದ್ದರಿಂದ. ವಿಷಯದ ಸೂಕ್ಷ್ಮತೆ ಮತ್ತು ಪ್ರಾಮುಖ್ಯತೆಯನ್ನು ಪರಿಗಣಿಸಿ, ಹಿಂದೂ ಪಕ್ಷಗಳ ಅರ್ಜಿಯ ಮೇಲೆ, ಮೇ 2023 ರಲ್ಲಿ, ಅಲಹಾಬಾದ್ ಹೈಕೋರ್ಟ್ ಏಕೀಕೃತ ನಿರ್ಧಾರಕ್ಕಾಗಿ ತನ್ನ ಮುಂದೆ ಎಲ್ಲಾ 18 ಅರ್ಜಿಗಳನ್ನು ಕರೆದಿತ್ತು.