ಮುಂಬೈ: ʻವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಸಮ್ಮುಖದಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದು ಸಹ ಲೈಂಗಿಕ ಉದ್ದೇಶವನ್ನು ವ್ಯಕ್ತಪಡಿಸುತ್ತದೆʼ ಎಂದು ಮುಂಬೈನ ವಿಶೇಷ ನ್ಯಾಯಾಲಯ ಹೇಳಿದೆ. ಈ ಸಂಬಂಧ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 60 ವರ್ಷದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಧೀಶ ಪ್ರಿಯಾ ಬಣಕಾರ್ ಅವರು ಆಗಸ್ಟ್ 29 ರಂದು ಆರೋಪಿಯನ್ನು ತಪ್ಪಿತಸ್ಥರೆಂದು ಘೋಷಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದರು. ಗುರುವಾರ ಈ ಆದೇಶ ಲಭ್ಯವಾಗಿದೆ.
ನಾಲ್ಕು ವರ್ಷದ ಬಾಲಕ ತನ್ನ ಮನೆಯ ಸಮೀಪವಿರುವ ಟೈಲರಿಂಗ್ ಅಂಗಡಿಗೆ ಹೋದಾಗ, ಆರೋಪಿ ತನ್ನ ಖಾಸಗಿ ಅಂಗವನ್ನು ಸ್ಪರ್ಶಿಸುತ್ತಿರುವುದನ್ನು ನೋಡಿದನು ಎಂಬುದು ಈ ಪ್ರಕರಣವಾಗಿದೆ.
ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ದೂರಿನ ಪ್ರಕಾರ, ಆರೋಪಿ ತನ್ನ ಖಾಸಗಿ ಅಂಗವನ್ನೂ ತೋರಿಸಿದ್ದಾನೆ ಎನ್ನಲಾಗಿದೆ. ಆದ್ರೆ, ಬಾಲಕನನ್ನು ಅಂಗಡಿ ಒಳಗೆ ಕರೆದಿಲ್ಲ, ಬಾಲಕನ ಬಳಿಯೂ ಹೋಗಿಲ್ಲ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ.
ಬಾಲಕನು ಈ ಕೃತ್ಯವನ್ನು ಆಕಸ್ಮಿಕವಾಗಿ ನೋಡಿದ್ದು ನಿಜ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
Alert ; ವ್ಯವಸ್ಥೆ ನಾಶ ಪಡಿಸಲು ಮಹಾ ಸಂಚು ; ಗೂಗಲ್ ಹೆಸ್ರು ಬಳಸಿಕೊಂಡು ವೈರಸ್ ಹರಡಿಕೆ ; 11 ದೇಶಗಳಿಗೆ ಕಂಟಕ
Rain In Karnataka : ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
ಹಣ ಸುಲಿಗೆ ಆರೋಪ: ಮೂರನೇ ಬಾರಿಗೆ ಮೇಘಾಲಯ ಬಿಜೆಪಿ ನಾಯಕ ʻಬರ್ನಾಡ್ ಎನ್ ಮರಕ್ʼ ಅರೆಸ್ಟ್