Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : `ಮೀನು’ ಪ್ರಿಯರೇ ಎಚ್ಚರ : ಈ 3 `ಫಿಶ್’ ಗಳನ್ನು ತಿನ್ನಬೇಡಿ ಆರೋಗ್ಯಕ್ಕೆ ಡೇಂಜರ್ !

16/03/2026 9:16 AM

ALERT : ಟಾಯ್ಲೆಟ್ ಗೆ `ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ : ಈ ಭಯಾನಕ ಕಾಯಿಲೆ ಬರುವುದು ಗ್ಯಾರಂಟಿ !

16/03/2026 9:15 AM

ತಂದೆಯ ಧೂಮಪಾನದ ಚಟ ಮಕ್ಕಳಿಗೂ ಆಪತ್ತು: ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಿಸುವ ಆತಂಕಕಾರಿ ವರದಿ!

16/03/2026 9:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಿಯಕರನ ಜೊತೆ ಸಂಸಾರ ಮಾಡಲು ಮಾಸ್ಟರ್ ಪ್ಲ್ಯಾನ್‌ : ನಾಪತ್ತೆಯಾಗಿದ್ದ ಪ್ರಿಯಾಂಕಾಳ ನೌಟಂಕಿ ಆಟ ಬಟಾ ಬಯಲು!
KARNATAKA

ಪ್ರಿಯಕರನ ಜೊತೆ ಸಂಸಾರ ಮಾಡಲು ಮಾಸ್ಟರ್ ಪ್ಲ್ಯಾನ್‌ : ನಾಪತ್ತೆಯಾಗಿದ್ದ ಪ್ರಿಯಾಂಕಾಳ ನೌಟಂಕಿ ಆಟ ಬಟಾ ಬಯಲು!

By kannadanewsnow0515/02/2026 4:36 PM

ಹಾಸನ : ನಿನ್ನೆ ಹಾಸನದಲ್ಲಿ ಮದುವೆಗೆ ಬಂದಿದ್ದ ಮಹಿಳೆ (v) ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಫೆ.12 ರಂದು ರಾತ್ರಿ ಕುಣಿಗಲ್‌ನಿಂದ ಚಿಕ್ಕಮಗಳೂರಿಗೆ ಬಂದಿದ್ದ ಬೇಲೂರು ತಾಲೂಕಿನ, ಮತ್ತಾವರ ಗ್ರಾಮದ ಮಹಿಳೆ ಪ್ರಿಯಾಂಕ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಳು.

ಕಲ್ಕೆರೆ ಗ್ರಾಮದ ಬಳಿ ಆಕೆಯ ಒಳುಉಡುಪು, ವ್ಯಾನಿಟಿ ಬ್ಯಾಗ್, ವೇಲ್, ಟಾಪ್ ಪತ್ತೆಯಾಗಿದ್ದವು. ಇದನ್ನು ಕಂಡ ಆಕೆಯ ಕುಟುಂಬಸ್ಥರು ಅತ್ಯಾಚಾರ ಮಾಡಿ‌ ಕೊಲೆ ಮಾಡಲಾಗಿದೆ, ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ. ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂದು ಆರೋಪಗಳ ಸುರಿಮಳೆಗೈದಿದ್ದರು. ಪ್ರಕರಣವನ್ನು ಸವಲಾಗಿ ಸ್ವೀಕರಿಸಿದ ಎಸ್ಪಿ ಶುಭನ್ವಿತಾ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಿದ್ದರು.

ಕಳೆದ ನಾಲ್ಕೈದು ವರ್ಷಗಳಿಂದ ಕುಣಿಗಲ್ ಬಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಪ್ರಿಯಾಂಕ ಹಾಗೂ ಡೇವಿಡ್ ಕೆಲಸ ಮಾಡುತ್ತಿದ್ದರು. ತನಗೆ ಮದುವೆಯಾಗಿ ಗಂಡು ಮಗುವಿದ್ದರು ಪ್ರಿಯಾಂಕ ಡೇವಿಡ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆನಂತರದಲ್ಲಿ ಇಬ್ಬರ ಸಂಬಂಧ ಹೊಂದಿದ್ದರು. ಈ ಬಗ್ಗೆ ಪತಿ ಹಾಗೂ ತಮ್ಮ ಕುಟುಂಬದವರಿಗೆ ಯಾವುದೇ ಅನುಮಾನ ಬಾರದ ರೀತಿ ನಡೆದುಕೊಂಡಿದ್ದಳು. ಫೆ.12 ರಂದು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕ ನಾಪತ್ತೆ ಪ್ರಕರಣ ದಾಖಲಾಗಿದ್ದು, ನಂತರ ಅದನ್ನು ಅರೇಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.

ಫೆ.12 ರಂದು ಸಂಜೆ 6.45 ರ ಸಮಯದಲ್ಲಿ ತಾಯಿ ಜೊತೆ ಬಂದಿದ್ದ ಕೈಮರದ ಬಳಿ ಬಂದಿದ್ದ ಪ್ರಿಯಾಂಕ ಸಾರಿಗೆ ಬಸ್ ಹತ್ತಿದ್ದಳು.‌ ನಂತರ ಬೇಲೂರು ಬಸ್ ನಿಲ್ದಾಣಕ್ಕೆ ಬಂದ ಪ್ರಿಯಾಂಕ 7:59 ರಲ್ಲಿ ತಾಯಿಗೆ ಕರೆ ಮಾಡಿ ಕುಣಿಗಲ್ ತೆರುಳುವುದಾಗಿ ಹೇಳಿ, ನಂತರ 8:07 ನಿಮಿಷಕ್ಕೆ ಚಿಕ್ಕಮ್ಮ ಸೌಮ್ಯ ಅವರಿಗೆ ಕರೆ ಮಾಡಿ ಅದೇ ರೀತಿ ಹೇಳಿದ್ದಳು.‌ 8:12 ಕ್ಕೆ ಪ್ರಿಯಾಂಕ ಫೋನ್ ಸ್ವಿಚ್ ಆಫ್ ಆಗಿತ್ತು. ಪ್ರಿಯಾಂಕ ಕಾಲ್ ಡಿಟೇಲ್ಸ್ ಆಧರಿಸಿ ಒಂದು ಪೊಲೀಸ್ ತಂಡವನ್ನು ಕುಣಿಗಲ್‌ಗೆ ಕಳಿಸಿದ್ದು ಅಲ್ಲಿ ಡೇವಿಡ್ ಮನೆಯಲ್ಲಿ ಸಿಕ್ಕಿ ಬಿದ್ದಿದ್ದಳು.

ತನಿಖೆಗಿಳಿದ ಪೊಲೀಸರು ಪ್ರಿಯಾಂಕ ಕಾಲ್ ಡಿಟೇಲ್ಸ್ ಹಾಗೂ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದ ವೇಳೆ ಹಲವು ಮಾಹಿತಿಗಳು ಸಿಕ್ಕಿದ್ದವು. ಇದನ್ನೇ ಆಧರಿಸಿ ಕುಣಿಗಲ್‌ಗೆ ತೆರಳಿದ ಕೆ.ಆರ್.ಪುರಂ ಪೊಲೀಸ್ ಠಾಣೆ ಪಿಎಸ್‌ಐ ವಿನಯ್‌ಕುಮಾರ್ ನೇತೃತ್ವದ ತಂಡ ಫೆ.14ರ ರಾತ್ರಿ ರಾತ್ರಿ ಪ್ರಿಯಾಂಕ ಆಕೆಯ ಪ್ರಿಯಕರ ಪಶ್ಚಿಮಬಂಗಾಳ ಮೂಲದ ಡೇವಿಡ್ ಮನೆಯಲ್ಲಿ ಆತನೊಂದಿಗೆ ಸಿಕ್ಕಿಬಿದ್ದಿದ್ದಳು.

ಡೇವಿಡ್ ಪಶ್ಚಿಮಬಂಗಾಳ ಮೂಲದವನಾಗಿದ್ದು, ಕೆಲವೇ ತಿಂಗಳಲ್ಲಿ ಫ್ಯಾಕ್ಟರಿ ಪಶ್ಚಿಮ‌ ಬಂಗಾಳಕ್ಕೆ ಶಿಫ್ಟ್ ಆಗುತ್ತಿತ್ತು. ಇಬ್ಬರು ಅಲ್ಲಿಗೆ ಹೋಗಿ ಸೆಟಲ್ ಆಗಲು ನಿರ್ಧರಿಸಿದ್ದರು. ಅದಕ್ಕಾಗಿ ಈ ರೀತಿಯ ನಾಟಕವಾಡಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ. ಇಬ್ಬರನ್ನು ಪೊಲೀಸರು ರಕ್ಷಣೆ ಮಾಡಲಾಗಿದ್ದು, ಚಿನ್ನಾಭರಣಗಳು ಅವರ ಬಳಿಯೇ ಇದೆ ಎಂದು ಎಸ್ಪಿ ಶುಭನ್ವಿತಾ ಮಾಹಿತಿ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ALERT : `ಮೀನು’ ಪ್ರಿಯರೇ ಎಚ್ಚರ : ಈ 3 `ಫಿಶ್’ ಗಳನ್ನು ತಿನ್ನಬೇಡಿ ಆರೋಗ್ಯಕ್ಕೆ ಡೇಂಜರ್ !

16/03/2026 9:16 AM1 Min Read

ALERT : ಟಾಯ್ಲೆಟ್ ಗೆ `ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ : ಈ ಭಯಾನಕ ಕಾಯಿಲೆ ಬರುವುದು ಗ್ಯಾರಂಟಿ !

16/03/2026 9:15 AM2 Mins Read

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

16/03/2026 9:12 AM2 Mins Read
Recent News

ALERT : `ಮೀನು’ ಪ್ರಿಯರೇ ಎಚ್ಚರ : ಈ 3 `ಫಿಶ್’ ಗಳನ್ನು ತಿನ್ನಬೇಡಿ ಆರೋಗ್ಯಕ್ಕೆ ಡೇಂಜರ್ !

16/03/2026 9:16 AM

ALERT : ಟಾಯ್ಲೆಟ್ ಗೆ `ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ : ಈ ಭಯಾನಕ ಕಾಯಿಲೆ ಬರುವುದು ಗ್ಯಾರಂಟಿ !

16/03/2026 9:15 AM

ತಂದೆಯ ಧೂಮಪಾನದ ಚಟ ಮಕ್ಕಳಿಗೂ ಆಪತ್ತು: ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಿಸುವ ಆತಂಕಕಾರಿ ವರದಿ!

16/03/2026 9:15 AM

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

16/03/2026 9:12 AM
State News
KARNATAKA

ALERT : `ಮೀನು’ ಪ್ರಿಯರೇ ಎಚ್ಚರ : ಈ 3 `ಫಿಶ್’ ಗಳನ್ನು ತಿನ್ನಬೇಡಿ ಆರೋಗ್ಯಕ್ಕೆ ಡೇಂಜರ್ !

By kannadanewsnow5716/03/2026 9:16 AM KARNATAKA 1 Min Read

ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಪ್ರೊಟೀನ್ ಸಮೃದ್ಧವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಎಲ್ಲಾ…

ALERT : ಟಾಯ್ಲೆಟ್ ಗೆ `ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ : ಈ ಭಯಾನಕ ಕಾಯಿಲೆ ಬರುವುದು ಗ್ಯಾರಂಟಿ !

16/03/2026 9:15 AM

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

16/03/2026 9:12 AM

ನೀವು ಪ್ರತಿದಿನ ಪುದೀನಾ ನೀರು ಕುಡಿದರೆ… ನಿಮ್ಮ ದೇಹದಲ್ಲಿ ನಡೆಯುವ ಅದ್ಭುತಗಳು ಇಲ್ಲಿವೆ!

16/03/2026 9:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.