ಧಾರವಾಡ : ಬೀದಿ ನಾಯಿಗಳ ಹಾವಳಿ ರಾಜ್ಯದ ಹಲವು ಕಡೆಗಳಲ್ಲಿ ಹೆಚ್ಚಾಗಿದೆ. ಬೀದಿನಾಯಿಗಳ ಉಪಟಳಕ್ಕೆ ಧಾರವಾಡ ಜಿಲ್ಲೆಯ ವಿದ್ಯಾ ಕಾಶಿಯ ಜನ ಕಂಗಾಲಾಗಿದ್ದಾರೆ. ಬೀದಿ ನಾಯಿಗಳು ಹಾಡ ಹಗಲೇ ಮಕ್ಕಳ ಮೇಲೆ ವಯೋವೃದ್ಧರ ಮೇಲೆ ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿವೆ. ರಾತ್ರಿ ವೇಳೆ ನಿರಂತರವಾಗಿ ಬೊಗಳುವುದು ಹಾಗೂ ಮನೆ ಮುಂದೆ ಅಂಗಡಿಗಳ ಮುಂದೆ ಹೊಲಸು ಮಾಡುವುದರಿಂದ ಧಾರವಾಡ ಜನರ ನೆಮ್ಮದಿಯನ್ನು ಹಾಳು ಮಾಡಿವೆ.
BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ ವರದಿ…!?
ಬೀದಿ ನಾಯಿಗಳ ಹಾವಳಿ ತಪ್ಪಿಸಲು ಧಾರವಾಡ ನಗರದ ಜನ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ ಹತೋಟಿಗೆ ಬರದ ಕಾರಣ ಈ ಕುರಿತು ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಗೆ ಎಷ್ಟೋ ಬಾರಿ ಮನವಿಗಳನ್ನು ಸಲ್ಲಿಸಿದರು. ಅದು ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತಿದ್ದ ಧಾರವಾಡದ ಜನ ಹೊಸ ತಂತ್ರದ ಮೊರೆ ಹೋಗಿದ್ದು, ಅದು ಬೀದಿನಾಯಿಗಳ ಕಾಟ ತಪ್ಪಿಸುವುದು ಅಷ್ಟೇ ಅಲ್ಲ ನೋಡುಗರ ಆಶ್ಚರ್ಯಕ್ಕೆ ಕಾರಣವಾಗಿದೆ.
ಕೆಂಪು ಬಣ್ಣದ ನೀರಿಗೆ ಬೆದರಿದ ಬೀದಿ ನಾಯಿಗಳು ಈ ಒಂದು ಹೊಸ ಐಡಿಯಾ ವಿದ್ಯಾ ಕಾಶಿಯ ಜನರಿಗೆ ವರದಾನವಾಗಿ ಪರಿಣಮಿಸಿದೆ. ಇದರಿಂದ ಬೀದಿ ನಾಯಿಗಳ ಉಪಟಳದಿಂದ ನಗರದ ಜನರಿಗೆ ಕೊಂಚ ಮಟ್ಟಿಗೆಯಲ್ಲ ಸಂಪೂರ್ಣವಾಗಿ ನೆಮ್ಮದಿ ದೊರತಿದೆ.
BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ ವರದಿ…!?
ಧಾರವಾಡ ನಗರದ ಜನರ ಈ ತಂತ್ರ ಅವರ ಕೈ ಹಿಡಿದಿದೆ. ಅಷ್ಟಕ್ಕೂ ಅದೇನು ಮಹಾನ ತಂತ್ರ ಮಾಟ ಮಂತ್ರ ಅಲ್ಲ. ಕೇವಲ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ಕೆಂಪು ಬಣ್ಣದ ನೀರು ತುಂಬಿಸಿ ಮನೆಯ ಮುಂದೆ, ಮನೆಯ ಗೇಟ್ ಮುಂದೆ ಕಟ್ಟುವುದು. ಇದರಿಂದ ನಾಯಿಗಳು ಹತ್ತಿರವೂ ಸುಳಿಯುದಿಲ್ಲ ಎಂದು ನಗರದ ಜನ ಹೇಳುತ್ತಿದ್ದಾರೆ.
ಬೀದಿ ನಾಯಿಗಳ ಕಾಟಕ್ಕೆ ಬಣ್ಣದ ನೀರಿನ ಪರಿಹಾರ
ಈಗ ನಗರದ ಪ್ರತಿಯೊಂದು ಸ್ಲಂ, ಸಣ್ಣ ಸಣ್ಣ ಬಡಾವಣೆ, ಪ್ರತಿಷ್ಠಿತ ಬಡಾವಣೆ ಹಾಗೂ ಶಾಪಿಂಗ್ ಮಾಲ್ ಆಫೀಸ್ಗಳ ಮುಂದೆ ಈ ಬಣ್ಣದ ನೀರು ತುಂಬಿರುವ ಬಾಟಲಿಗಳನ್ನು ಕಾಣಬಹುದು. ಈ ಮೂಲಕ ಬೀದಿನಾಯಿಗಳ ಸಮಸ್ಯೆಗೆ ನಗರದ ಜನರು ಪರಿಹಾರ ಕಂಡುಕೊಂಡಿದ್ದಾರೆ. ಕೆಂಪು ಬಣ್ಣದ ನೀರು ತುಂಬಿದ ಪ್ಲಾಸ್ಟಿಕ್ ಬಾಟಲ್ಗಳೇ ಬೀದಿ ನಾಯಿಗಳ ಕಾಟಕ್ಕೆ ಪರಿಹಾರವಾಗಿವೆ.
BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ ವರದಿ…!?
ಲಕ್ಷ್ಮೀ ಸಿಂಗನಕೇರಿ, ಮೆಹಬೂಬನಗರ, ಮಾಳಾಪುರ, ಬನಶ್ರೀ ನಗರ, ಆದರ್ಶ ನಗರ, ಸಂಪಿಗೆ ನಗರ ಸೇರಿದಂತೆ ನಾಯಿಗಳ ಕಾಟ ಹೆಚ್ಚಾಗಿರುವ ವಿವಿಧ ಬಡಾವಣೆಗಳಲ್ಲಿ ಮನೆಯ ಮುಂದೆ ಮರ ಗಿಡಗಳಿಗೆ ಬಣ್ಣದ ನೀರು ತುಂಬಿದ ಬಾಟಲಿಗಳನ್ನು ಕಟ್ಟಲಾಗಿದೆ.
ಪರಿಹಾರ ಕಂಡುಕೊಂಡ ಜನರು
ನಾಯಿಗಳಿಗೆ ಕೆಂಪು ಬಣ್ಣದ ನೀರು ಎಂದರೆ ಅಲರ್ಜಿ ಎಂಬುದನ್ನು ನಗರದ ಸಂಶೋಧಕರೊಬ್ಬರು ಕಂಡು ಹಿಡಿದು ಮನೆಯ ಮುಂದೆ ಬಾಟಲ್ ಕಟ್ಟಿ ಶ್ವಾನಗಳ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಇದೇ ರೀತಿ ಹಲವಾರು ಜನರು ಇದನ್ನು ನಂಬಿ ತಮ್ಮ ಮನೆಗಳ ಮುಂದೆ ಕೆಂಪು ನೀರಿನ ಬಾಟಲ್ ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ಮನೆಯ ಮುಂದಿನ ಗಿಡಗಳಿಗೆ ಬಾಟಲ್ ಕಟ್ಟಿದ್ದಾರೆ.
ಇದು ಮೂಢನಂಬಿಕೆಯಲ್ಲ, ಇದರಿಂದ ನಮಗಂತೂ ಪರಿಹಾರ ಸಿಕ್ಕಿದೆ ಎಂದು ನಗರದ ನಿವಾಸಿಗಳು ಹೇಳಿದ್ದಾರೆ. ಇದು ಕೇವಲ ಸ್ಲಂ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೇ, ಪ್ರತಿಷ್ಠಿತ ಬಡಾವಣೆಗಳಲ್ಲಿ ಹಾಗೂ ಕಾಂಪೌಂಡ್ ಇಲ್ಲದ ಮನೆಗಳಲ್ಲಿ ಬಾಗಿಲಿಗೆ ಕೆಂಪು ಬಣ್ಣದ ನೀರು ತುಂಬಿದ ಬಾಟಲ್ಗಳನ್ನು ನೇತುಹಾಕಿದ್ದಾರೆ.
ಬೀದಿ ನಾಯಿಗಳ ಕಾಟ ತಪ್ಪಿಸಲು ಅಹಿಂಸಾ ಮಾರ್ಗ
ಶಾಪಿಂಗ್ ಕಾಂಪ್ಲೆಕ್ಸ್ಗಳ ಗೇಟ್ಗಳಿಗೂ ಬಣ್ಣದ ನೀರು ತುಂಬಿದ ಬಾಟಲ್ಗಳನ್ನು ಕಟ್ಟಲಾಗಿದೆ. ಕೆಂಪು ಬಣ್ಣದ ನೀರಿನ ಬಾಟಲ್ ನೋಡಿದರೆ ನಾಯಿಗಳಿಗೆ ಏನಾಗುತ್ತದೋ ಗೊತ್ತಿಲ್ಲ. ಇದರಿಂದ ನಾಯಿಗಳಂತೂ ತಮ್ಮ ನೆಲೆಯನ್ನು ಬದಲಿಸಿಕೊಂಡು ಸುರಕ್ಷಿತ ತಾಣದಲ್ಲಿ ನೆಲೆ ಕಂಡುಕೊಂಡಿವೆ ಎಂದು ಬಡಾವಣೆಯ ಜನರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬೀದಿ ನಾಯಿಗಳ ಕಾಟಕ್ಕೆ ಅಹಿಂಸಾ ಮಾರ್ಗದಲ್ಲಿ ಧಾರವಾಡ ನಗರ ಜನತೆಗೆ ಪರಿಹಾರ ಸಿಕ್ಕಿದೆ. ಇನ್ನು ಮನೆಯ ಮುಂದೆ ಕೆಂಪುಬಣ್ಣದ ನೀರಿನ ಬಾಟಲ್ ಕಟ್ಟುವುದಕ್ಕೂ ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸುತ್ತಾರೋ ಕಾದು ನೋಡಬೇಕು.
BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ ವರದಿ…!?