ರಾಜಸ್ಥಾನ : ಇಂದು ಬೆಳಗ್ಗೆ ಜಾಲಾವರ ರಸ್ತೆಯಲ್ಲಿರುವ ಅನಂತಪುರ ಸ್ವಾಗತ ದ್ವಾರದಿಂದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಆರೆಂಭಗೊಂಡಿದ್ದು, ಈ ಸಂದರ್ಭದಲ್ಲಿ ಯುವಕನೋರ್ವ ರಾಹುಲ್ ಆಗಮನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾನೆ
ಅಷ್ಟೇ ಅಲ್ಲದೇ ರಾಜೀವ್ ಗಾಂಧಿ ಪ್ರತಿಮೆಗೆ ಲ್ಯಾಪ್ಟಾಪ್ ಸಹಾಯದಿಂದ ಮಾಲಾರ್ಪಣೆ ಮಾಡಲು ತೆರಳುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನಾನು ವಿರೋಧಿಸುತ್ತೇನೆಂದು ಯುವಕನೋರ್ವ ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ
ತಕ್ಷಣ ಪಕ್ಕದಲ್ಲಿವರು ತಕ್ಷಣವೇ ಬೆಂಕಿ ನಂದಿಸಿದ್ದಾರೆ. ಆಂಬ್ಯಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ಸಿಐಡಿ ಗುಪ್ತಚರ ದಳದವರು ಕೂಡ ಆಸ್ಪತ್ರೆಗೆ ತೆರಳಿದ್ದು, ಯುವಕನನ್ನು ವಶಕ್ಕೆ ಪಡೆದಿದ್ದಾರೆ.