ನವದೆಹಲಿ : ಪ್ರತಿನಿತ್ಯ ನಾವು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಚಾರಗಳ ಬಗ್ಗೆ ಸುದ್ದಿ, ವಿಡಿಯೀ ನೋಡುತ್ತೀರುತ್ತೇವೆ. ಅದರಲ್ಲಿ ಕೆಲವು ವಿಡಿಯೋ, ಸುದ್ದಿ, ಪೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗಿ ಬಿಡುತ್ತದೆ.
ಅಂತೆಯೇ ಇಲ್ಲೊಂದು ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆದಿದೆ. ಮದುವೆ ಕುರಿತಾಗಿ ಪರೀಕ್ಷೆಯಲ್ಲಿ ಶಿಕ್ಷಕರು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಉತ್ತರ ಕೊಟ್ಟ ಪರಿ ನೋಡಿ ಶಿಕ್ಷಕರು ತಬ್ಬಿಬ್ಬಾಗಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ.
ಮದುವೆ ಎಂದರೇನು?
ಮದುವೆ ಎಂದರೇನು ಎಂಬ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿ ‘ ನೀನು ದೊಡ್ಡವಳಾಗಿದ್ದೀಯಾ,,? ಹಾಗಾಗಿ ನೀವು ಒಬ್ಬ ವ್ಯಕ್ತಿಯನ್ನು ಹುಡುಕಿಕೊ..ಮತ್ತು ಆತ ನಿನಗೆ ಆಹಾರ ನೀಡಿ ಪೋಷಿಸಲು ಆರಂಭಿಸುತ್ತಾನೆ ಎಂದು ಹುಡುಗಿಯ ಪಾಲಕರು ಹೇಳುತ್ತಾರೆ. ಅದೇ ರೀತಿ ಹುಡುಗನ ಮನೆಯವರು ಸಹ ನೀಡು ದೊಡ್ಡವನಾಗಿದ್ದೀಯಾ, ದಯವಿಟ್ಟು ಮದುವೆ ಆಗು ಎಂದು ಕೇಳಿಕೊಳ್ಳುತ್ತಾರೆ. ಆಗ ಇಬ್ಬರು ಹುಡುಗ ಹುಡುಗಿ ಇಬ್ಬರು ಒಟ್ಟಿಗೆ ಬದುಕಲು ನಿರ್ಧರಿಸುತ್ತಾರೆ, ನಂತರದಲ್ಲಿ ಮಕ್ಕಳನ್ನು ಪಡೆಯಲು ಅವರು ತಪ್ಪು ಕೆಲಸ ಮಾಡಲು ಶುರು ಮಾಡುತ್ತಾರೆ ಎಂದು ವಿದ್ಯಾರ್ಥಿ ಬರೆದಿದ್ದಾನೆ.
ವಿದ್ಯಾರ್ಥಿ ಬರೆದ ಉತ್ತರ ನೋಡಿದ ಶಿಕ್ಷಕ ದಂಗಾಗಿ ಹೋಗಿದ್ದು, ನಾನ್ ಸೆನ್ಸ್ ಎಂದು 10 ಕ್ಕೆ ಸೊನ್ನೆ ನೀಡಿ ನನ್ನನ್ನು ಬಂದು ನೋಡು ಎಂದು ಉತ್ತರ ಪತ್ರಿಕೆಯಲ್ಲಿ ಕೆಂಪು ಬಣ್ಣದ ಪೆನ್ ನಿಂದ ಬರೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಸಖತ್ ವೈರಲ್ ಆಗಿದೆ.
What is marriage? 😂 pic.twitter.com/tM8XDNd12P
— Velu (@srpdaa) October 11, 2022