ಬೆಂಗಳೂರು : ಬೆಂಗಳೂರಲ್ಲಿ ಪ್ರಿಯಕರನ ಮನೆಯಲ್ಲಿ ಪ್ರೇಯಸಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಬೆಂಗಳೂರು ಉತ್ತರ ತಾಲೂಕಿನ ಪಿಲ್ಲಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಹಾಸನದ ಅರಸೀಕೆರೆ ಮೂಲದ ನಿಕಿತಾ (19) ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರಿಯಕರ ರಾಘವೇಂದ್ರ ವಿರುದ್ಧ ನಿಕಿತಾ ಪೋಷಕರು ಆರೋಪಿಸಿದ್ದು. ಐದರಿಂದ ಆರು ವರ್ಷ ನಿಕಿತಾ ಹಾಗೂ ರಾಘವೇಂದ್ರ ಪ್ರೀತಿಸುತ್ತಿದ್ದರು. ಹೊಸ ವರ್ಷದ ದಿನ ನಿಕಿತಾ ರಾಘವೇಂದ್ರ ಮನೆಗೆ ತೆರಳಿದಾಗ ತಾಳಿ ಕಟ್ಟಿ ಮದುವೆಯಾಗು ಎಂದು ಒತಾಯಿಸಿದ್ದರಂತೆ ಪ್ರಿಯಕರ ಹಾಗೂ ಮನೆಯವರು ಇಲ್ಲದ ವೇಳೆ ನಿಕಿತಾ ನೇಣಿಗೆ ಶರಣಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








