ಕೆಎನ್ ಎನ್ ಸಿನಿಮಾಡೆಸ್ಕ್ : ‘ಆರ್.ವಿ.ಎಸ್ ಪ್ರೊಡಕ್ಷನ್’ ಅಡಿಯಲ್ಲಿ ಬನಾನ ಶಿವರಾಮ್ ನಿರ್ಮಿಸುತ್ತಿರುವ ಅಪ್ಪಟ ಪ್ರೇಮಕಥಾ ಹಂದರದ ‘ಮರೆಯದೆ ಕ್ಷಮಿಸು’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಕೆ. ರಾಘವನ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಭರತ್ ಭೋಪಣ್ಣ ನಾಯಕನಾಗಿ ಮೇಘನಾ ಗೌಡ ನಾಯಕಿಯಾಗಿದ್ದು, ಉಳಿದಂತೆ ರಾಘು, ರಮೇಶ್ ಭಟ್, ರಾಕ್ಲೈನ್ ಸುಧಾಕರ್, ಅಪೂರ್ವ, ಮಿಮಿಕ್ರಿ ಗೋಪಿ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ, ಸೆನ್ಸಾರ್ ಪ್ರಮಾಣ ಪತ್ರವನ್ನು ಪಡೆದಿರುವ ಚಿತ್ರ, ಮುಂದಿನ ವರ್ಷ ಜನವರಿ 6 ರಂದು ಬಿಡುಗಡೆಯಾಗುತ್ತಿದೆ.
ಇನ್ನು ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಕೆ. ರಾಘವನ್, ‘ಮರೆಯದೆ ಕ್ಷಮಿಸು, ಲವ್ ಜಾನರ್ ಕಂಟೆಂಟ್ ಸಿನಿಮಾ. ಒಬ್ಬ ಬಡ ಹುಡುಗ ಶ್ರೀಮಂತ ಹುಡುಗಿಯ ಪ್ರೀತಿಯ ಬಲೆಯಲ್ಲಿ ಬಿದ್ದ ನಂತರ ಏನೆಲ್ಲಾಾ ಆಗುತ್ತೆೆ. ಪ್ರೀತಿ ಒಳ್ಳೆೆದು ನೀಡುತ್ತದೆ, ಕೆಟ್ಟದ್ದು ನೀಡುತ್ತದೆ. ಅದು ಅವರವರ ಅನುಭವಕ್ಕೆೆ ಬಿಟ್ಟಿದ್ದು. ಆದರೆ ಇಲ್ಲಿ ಮುಂದೇನಾಗುತ್ತದೆ ಅನ್ನುವುದರ ಮೂಲಕ ಒಂದು ಸಂದೇಶವನ್ನು ನೀಡುತ್ತಿದ್ದೇವೆ. ಮರೆಯದೆ ಕ್ಷಮಿಸು ಅಂತ ಯಾರು ಯಾರಿಗೆ ಹೇಳುತ್ತಾರೆ ಅನ್ನುವುದೇ ಚಿತ್ರ ಕ್ಲೈಮ್ಯಾಕ್ಸ್’ ಎನ್ನುತ್ತಾರೆ.
`ಮರೆಯದೆ ಕ್ಷಮಿಸು’ ಚಿತ್ರಕ್ಕೆ ಕಾರ್ತಿಕ ವೆಂಕಟೇಶ್ ಸಂಗೀತ ಸಂಯೋಜನೆ, ನಂದಾ ಮಾಸ್ಟರ್ ನೃತ್ಯ ಸಂಯೋಜನೆ, ಜಾನಿ ಮಾಸ್ಟರ್ ಸಾಹಸ, ರಿಷಿಕೇಶ ಛಾಯಾಗ್ರಹಣವಿದೆ.