ಪಾಕಿಸ್ತಾನ: ಪಾಕಿಸ್ತಾನದ ಜಾಕೋಬಾಬಾದ್ನಲ್ಲಿ ಹಿಂದೂ ಮಹಿಳೆಯೊಬ್ಬರು ಉನ್ನತ ಮಟ್ಟದ ಪೊಲೀಸ್ ಹುದ್ದೆಗೇರಿದ್ದಾರೆ. ಇವರು ಪಾಕಿಸ್ತಾನದಲ್ಲಿ ಡಿಎಸ್ಪಿ ಶ್ರೇಯಾಂಕದ ಹುದ್ದೆಗೇರಿದ ದೇಶದ ಮೊದಲ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮಹಿಳೆಯಾಗಿದ್ದಾರೆ.
26 ವರ್ಷದ ಮನೀಶಾ ರೋಪೇಟಾ ಈ ಉನ್ನತ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿಯಾಗಿದ್ದಾರೆ. ಪಾಕಿಸ್ತಾನದ ಪುರುಷ ಪ್ರಧಾನ ಸಮಾಜ ಮತ್ತು ಸಂಸ್ಕೃತಿಯಲ್ಲಿ ಮಹಿಳೆಯರು ಉನ್ನತ ಹುದ್ದೆ ಪಡೆಯುವುದು ಸುಲಭದ ಮಾತಲ್ಲ. ಈ ನಡುವೆಯೂ ಅಲ್ಪಸಂಖ್ಯಾತ ಸಮುದಾಯದಿಂದ ಬಂದ ಮನೀಶಾ ಸಿಂಧ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಡಿಎಸ್ಪಿ ಹುದ್ದೆಗೇರಿದ್ದಾರೆ.
ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಡಿಎಸ್ ಮನೀಶಾ ರೋಪೇಟಾ, “ಬಾಲ್ಯದಿಂದಲೂ ನಾನು ಮತ್ತು ನನ್ನ ಸಹೋದರಿಯರು ಅದೇ ಹಳೆಯ ಪಿತೃಪ್ರಭುತ್ವದ ವ್ಯವಸ್ಥೆಯನ್ನು ನೋಡಿದ್ದೇವೆ, ಅಲ್ಲಿ ಹುಡುಗಿಯರು ಶಿಕ್ಷಣ ಪಡೆಯಲು ಮತ್ತು ಕೆಲಸ ಮಾಡಲು ಬಯಸಿದರೆ, ಅವರು ಶಿಕ್ಷಕರು ಅಥವಾ ವೈದ್ಯರಾಗಬಹುದು. ಹುಡುಗಿಯರು ಓದಿ, ತಮ್ಮ ಕನಸು ನನಸಾಗಿಸಿಕೊಳ್ಳಲು ಕೆಲವೇ ಕೆಲವರು ಮಾತ್ರ ಪ್ರೋತ್ಸಾಹ ನೀಡುತ್ತಾರೆ. ಎಲ್ಲರಿಗೂ ಈ ಭಾಗ್ಯ ಇಲ್ಲ. ಇಂತಹ ಭಾವನೆಗಳನ್ನೂ ಹೊರ ಹಾಕಿ, ತಮ್ಮ ಗುರಿಯತ್ತ ಸಾಗುವುದರೆಡೆಗೆ ಸಾಗಬೇಕು” ಎಂದಿದ್ದಾರೆ.
ರೋಪೇಟಾ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್ನ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅವರದು ವೈದ್ಯರ ಕುಟುಂಬ. ಅವರ ಮೂವರು ಸಹೋದರಿಯರು ವೈದ್ಯರು ಮತ್ತು ಕಿರಿಯ ಸಹೋದರ ಕೂಡ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುತ್ತಿದ್ದಾನೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ರೋಪೇಟಾ ಒಂದು ಅಂಕದಿಂದ ಅನುತ್ತೀರ್ಣರಾದರು. ಸಿಂಧ್ ಪಬ್ಲಿಕ್ ಸರ್ವಿಸಸ್ ಕಮಿಷನ್ ಪರೀಕ್ಷೆಗಳಲ್ಲಿ 16 ನೇ ಸ್ಥಾನ ಪಡೆದ ರೊಪೆಟಾ ಪೊಲೀಸ್ ಇಲಾಖೆಗೆ ಸೇರಿಕೊಂಡರು.
BIGG NEWS : ರಾಜ್ಯ ಸರ್ಕಾರ ಸಾವಿನಲ್ಲೂ ʼಕೊಲೆಗೆಡುಕ ರಾಜಕಾರಣʼ ಮಾಡುತ್ತಿದೆ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
BIGG BREAKING NEWS : ಮಂಗಳೂರಿನ ಸುರತ್ಕಲ್ ನಲ್ಲಿ `ಫಾಜಿಲ್ ಹತ್ಯೆ’ ಕೇಸ್ : ಸಿಎಂ ಬೊಮ್ಮಾಯಿ ಹೇಳಿದ್ದೇನು?
BIGG BREAKING NEWS : ಮಂಗಳೂರಿನ ಸುರತ್ಕಲ್ ನಲ್ಲಿ `ಫಾಜಿಲ್ ಹತ್ಯೆ’ ಕೇಸ್ : ಸಿಎಂ ಬೊಮ್ಮಾಯಿ ಹೇಳಿದ್ದೇನು?