ನವದೆಹಲಿ: ಮದ್ಯ ನೀತಿ ಪ್ರಕರಣಕ್ಕೆ ಸಂಬಂಧ ವಿಚಾರಣೆಗಾಗಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಅವರನ್ನು ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿರುವ ಸಿಬಿಐ ಕೇಂದ್ರ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ.
ಆದ್ರೆ, ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿರುವುದನ್ನು ಮನೀಶ್ ಸಿಸೋಡಿಯಾ ಅವರು ಸಮನ್ಸ್ ಅನ್ನು ಗುಜರಾತ್ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಲಿಂಕ್ ಮಾಡಿದ್ದಾರೆ. ʻಮುಂದಿನ ದಿನಗಳಲ್ಲಿ ನಾನು ಚುನಾವಣಾ ಪ್ರಚಾರಕ್ಕಾಗಿ ಗುಜರಾತ್ಗೆ ಹೋಗಬೇಕಾಗಿತ್ತು. ನಾನು ಗುಜರಾತ್ಗೆ ಹೋಗುವುದನ್ನು ತಡೆಯುವುದು ಅವರ ಉದ್ದೇಶವಾಗಿದೆ. ಗುಜರಾತ್ನಲ್ಲಿ ಸೋಲುತ್ತಿದೆ ಎಂದು ಬಿಜೆಪಿಗೆ ಗೊತ್ತಿರುವುದರಿಂದಲೇ ಅವರು ಕಂಗಾಲಾಗಿದ್ದಾರೆ. ಆದ್ರೆ, ನಾನು ಗುಜರಾತ್ ಚುನಾವಣಾ ಪ್ರಚಾರವನ್ನು ನಿಲ್ಲಿಸುವುದಿಲ್ಲʼ ಎಂದು ಸಿಸೋಡಿಯಾ ಅವರು ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ.
लेकिन मेरे जेल जाने से गुजरात का चुनाव प्रचार रुकेगा नहीं। आज हर गुजराती खड़ा हो गया है। अच्छे स्कूल, अस्पताल, नौकरी, बिजली के लिए गुजरात का बच्चा बच्चा अब चुनाव प्रचार कर रहा है। गुजरात का आने वाला चुनाव एक आंदोलन होगा।
— Manish Sisodia (@msisodia) October 17, 2022
ಸಿಸೋಡಿಯಾ ಅವರು ಟ್ವೀಟ್ ಮಾಡಿದ ವೀಡಿಯೊದಲ್ಲಿ, ಸಿಬಿಐ ಕಚೇರಿಗೆ ಹೊರಡುವ ಮೊದಲು ಅವರ ಆಶೀರ್ವಾದ ಪಡೆಯಲು ಅವರ ತಾಯಿಯ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ.
माता जी का आशीर्वाद लेकर CBI हेडक्वार्टर जाते हुए | LIVE https://t.co/PW2lFX87UZ
— Manish Sisodia (@msisodia) October 17, 2022
BIG NEWS: ಇರಾನ್ನ ಉತ್ತರ ಟೆಹ್ರಾನ್ನ ಎವಿನ್ ಜೈಲಿನಲ್ಲಿ ಬೆಂಕಿ ಅವಘಡ: ನಾಲ್ವರು ಕೈದಿಗಳು ಸಾವು, 16 ಮಂದಿಗೆ ಗಾಯ
BIGG NEWS: ಕಾಂಗ್ರೆಸ್ ಸಮಾವೇಶ ನಡೆದ ಬಳಿಕ ಬಳ್ಳಾರಿ ಮೈದಾನ ಸ್ವಚ್ಛಗೊಳಿಸಿದ ಸಚಿವ ಶ್ರೀರಾಮುಲು