ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬ್ಯಾಂಕಾಕ್ನಲ್ಲಿ ನಡೆದ ಏಷ್ಯನ್ ಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಚೀನಾ ತೈಪೆಯ ಚೆನ್ ಸ್ಜು-ಯು ವಿರುದ್ಧ 4-3 ಅಂತರದಲ್ಲಿ ಜಯಗಳಿಸುವ ಮೂಲಕ ಸ್ಟಾರ್ ಪ್ಯಾಡ್ಲರ್ ಮನಿಕಾ ಬಾತ್ರಾ ಸೆಮಿಫೈನಲ್ ತಲುಪಿದ್ದಾರೆ. ಈ ಮೂಲಕ ಸೆಮಿ ಪೈನಲ್ ಪ್ರವೇಶಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ವಿಶ್ವ ಶ್ರೇಯಾಂಕಿತ 44ನೇ ಶ್ರೇಯಾಂಕಿತೆ ಮಣಿಕಾ ಐಟಿಟಿಎಫ್ ಪಟ್ಟಿಯಲ್ಲಿ 23ನೇ ಶ್ರೇಯಾಂಕದ ಚೆನ್ ಅವರನ್ನು 6-11 11-6 11-5 11-7 8-11 9-11 11-9 ಕಠಿಣ ಹೋರಾಟದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಸೋಲಿಸಿದರು.
ಈ ಹಿಂದೆ ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಭಾರತದ ಏಸ್ ವಿಶ್ವದ ನಂ.7ನೇ ಶ್ರೇಯಾಂಕದ ಚೀನಾದ ಚೆನ್ ಕ್ಸಿಂಗ್ಟಾಂಗ್ಗೆ ಆಘಾತ ನೀಡಿದ್ದರು.
ಸೆಮಿಫೈನಲ್ನಲ್ಲಿ ಮಣಿಕಾ ಅವರು ಕೊರಿಯಾದ ಜಿಯೋನ್ ಜಿಹೀ ಮತ್ತು ಜಪಾನ್ನ ಮಿಮಾ ಇಟೊ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.