ಮಂಗಳೂರು : ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟ ಪ್ರಕರಣದಲ್ಲಿ ಶಿವಮೊಗ್ಗದ ಶಂಕಿತ ಉಗ್ರ ಶಾರಿಕ್ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ.
ಇದರ ನಡುವೆ ಪಿಎಫ್ಐ ನಿಷೇಧ ಮಾಡಿದ್ದಕ್ಕೆ ಪ್ರತೀಕಾರವಾಗಿ ಮಂಗಳೂರಿನಲ್ಲಿ ಆಟೋ ಬಾಂಬ್ ಬ್ಲಾಸ್ಟ್ ನಡೆಯಿತಾ..? ಎಂಬ ದೊಡ್ಡ ಅನುಮಾನ ಮೂಡಿದೆ. ಈ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಸ್ಪೋಟವಾದ ಐಇಡಿಯನ್ನು ಸ್ಥಳೀಯವಾಗಿ ಸಿಗುವ ರಾಸಾಯನಿಕ ಬಳಸಿ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬೆನ್ನಲ್ಲೇ ಮಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದು, ನಿಷೇಧಿತ ಪಿಎಫ್ಐ ಸಂಘಟನೆ ಬೆನ್ನತ್ತಿದ್ದಾರೆ . ಈಗಾಗಲೇ ಸಿಕ್ಕಿಹಾಕಿಕೊಂಡಿರುವ ಆರೋಪಿಗಳನ್ನು ಎನ್ ಐ ಎ ಹಾಗೂ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಮಂಗಳೂರು ಆಟೋ ರಿಕ್ಷಾ ಸ್ಪೋಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಸ್ಪೋಟಕ ಮಾಹಿತಿಯೊಂದು ಲಭ್ಯವಾಗಿದ್ದು, ಮಂಗಳೂರು ಸ್ಪೋಟದಲ್ಲಿ ಶಿವಮೊಗ್ಗದ ಶಂಕಿತ ಉಗ್ರ ಶಾರಿಕ್ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಶಕಿಂತ ಉಗ್ರ ಶಾರಿಕ್ ಕೆಲ ದಿನಗಳ ಹಿಂದೆ ಶಿವಮೊಗ್ಗದಿಂದ ನಾಪತ್ತೆಯಾಗಿದ್ದಾನೆ. ಸದ್ಯ ಮಂಗಳೂರು ಆಟೋ ಸ್ಪೋಟದಲ್ಲಿ ಗಾಯಗೊಂಡಿರುವ ಗಾಯಾಳು ಶಂಕಿತ ಉಗ್ರ ಶಾರಿಕ್ ಎನ್ನಲಾಗುತ್ತಿದ್ದು, ಗಾಯಾಳುವಿನ ಮುಖ ಸಂಪೂರ್ಣ ಸುಟ್ಟು ಹೂಗಿರುವ ಹಿನ್ನೆಲೆಯಲ್ಲಿ ಶಾರಿಕ್ ಗುರುತು ಪತ್ತೆ ಹೆಚ್ಚಲು ಶಾರಿಕ್ ಕುಟುಂಬಸ್ಥರನ್ನು ಕರೆಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
BREAKING NEWS : ಮಂಗಳೂರು ಆಟೋ ಸ್ಪೋಟ ಪ್ರಕರಣದಲ್ಲಿ ಶಂಕಿತ ಉಗ್ರ ಶಾರಿಕ್ ಭಾಗಿ?
‘ನಾವು ಮೀಸಲಾತಿ ಹೆಚ್ಚಳ ಮಾಡಿದ್ದೀವಿ, ತಾಕತ್ತಿದ್ರೆ ತಡೀರಿ’ : ಸಚಿವ ಶ್ರೀರಾಮುಲು ಸವಾಲ್ |Sri Ramulu