ದಕ್ಷಿಣಕನ್ನಡ : ಮಂಗಳೂರಿನ ಮಳಲಿ ಮಸೀದಿ ವಿವಾದ ಸಂಬಂಧ ಇಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಮಳಲಿ ಮಸೀದಿ ವಕ್ಫ್ ಬೋರ್ಡ್ ಆಸ್ತಿ ಎಂದು ಪ್ರತ್ಯೇಕ ವಾದ ಮಂಡಿಸಲು ಮುಂದಾಗಿದೆ. ವಕೀಲರ ಮೂಲಕ ವಕಾಲತ್ತು ದಾಖಲಿಸಿ ಪ್ರಕರಣದಲ್ಲಿ ಅಧಿಕೃತ ಹೋರಾಟಕ್ಕೆ ವಕ್ಫ್ ಬೋರ್ಡ್ ಇಳಿದಿದೆ. ಸದ್ಯ ಹೈಕೋರ್ಟ್ ನಿಂದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ಗೆ ನಿರ್ದೇಶನ ಸಿಕ್ಕಿದೆ.
ದಕ್ಷಿಣ ಕನ್ನಡ ಜಿಲ್ಲಾ ಬೋರ್ಡ್ ಎಂದು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಇಂದು ವಕಾಲತ್ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮಳದಿ ಮಸೀದಿ ಆಸ್ತಿ ಜಿಲ್ಲಾ ಬೋರ್ಡ್ ಗೆ ಸೇರಿದ್ದು ಎಂದು ದಾಖಲೆ ಸಲ್ಲಿಸಿದ್ದಿ, ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆ ಮಳಲಿ ಮಸೀದಿ, ಹಾಗೂ ವಿ ಎಚ್ ಪಿ ಇಂದಲೂ ದಾಖಲೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮಳಲಿ ಮಸೀದಿ ಸಂಬಂಧ ಈಗಾಗಲೇ ಹೈಕೋರ್ಟ್ ತೀರ್ಪು ನೀಡಿದೆ.
ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿ ಹೌದಾ? ಅಲ್ಲವಾ ಅಂತ ನಿರ್ಧರಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯ ಹೈಕೋರ್ಟ್ ಈಗಾಗಲೇ ತೀರ್ಪು ಪ್ರಕಟಿಸಿ ಆದೇಶ ಹೊರಡಿಸಿದೆ. ಹೀಗಾಗಿ ಹೈಕೋರ್ಟ್ ಆದೇಶ ತಲುಪಿದ ಕೂಡಲೇ ಮಂಗಳೂರು ಕೋರ್ಟ್ನಲ್ಲಿ ಮತ್ತೆ ವಿಚಾರಣೆ ಆರಂಭವಾಗಲಿದೆ. ಇಂದು ಆದೇಶ ತಲುಪಿದರೇ ವಾದ ಮಂಡಿಸಲು ವಿಎಚ್ಪಿ ಪರ ವಕೀಲರಿಂದಲೂ ಅರ್ಜಿ ಸಲ್ಲಿಕೆಯಾಗಲಿದೆ.
ಇನ್ನು ಮತ್ತೊಂದೆಡೆ ವಿಎಚ್ಪಿ ಮತ್ತು ಮಳಲಿ ಮಸೀದಿ ಕಾನೂನು ಹೋರಾಟಕ್ಕೆ ವಕ್ಫ್ ಬೋರ್ಡ್ ಎಂಟ್ರಿಯಾಗಿದೆ. ಮಳಲಿ ಮಸೀದಿ ವಕ್ಫ್ ಆಸ್ತಿ ಎಂದು ದಾಖಲೆ ಸಲ್ಲಿಸಲು ದಕ್ಷಿಣ ಕನ್ನಡ ವಕ್ಫ್ ಬೋರ್ಡ್ ತಯಾರಿ ನಡೆಸಿದೆ. ಮಳಲಿ ಮಸೀದಿ ಮತ್ತು ವಿಎಚ್ಪಿಯಿಂದಲೂ ಈ ಸಂಬಂಧ ದಾಖಲೆ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಸದ್ಯ ಈಗ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಮಳಲಿ ಮಸೀದಿ ವಿವಾದ ವೇದಿಕೆಯಾಗಿದೆ.