ಮಂಗಳೂರು : ಮದುವೆಯ ಹಿಂದಿನ ದಿನ ಮದರಂಗಿ ಹಾಕಿಸಿಕೊಂಡು ಬರುವೆ ಎಂದು ಹೇಳಿ ಬ್ಯೂಟಿ ಪಾರ್ಲರ್ ಗೆ ಹೋದ ವಧು ನಾಪತ್ತೆಯಾಗಿದ್ದಾಳೆ.ಈ ಘಟನೆಯು ಮಂಗಳೂರಿನ ಬೋಳಾರ್ ನಲ್ಲಿ ನಡೆದಿದೆ.
22 ವರ್ಷದ ಪಲ್ಲವಿ ನಾಪತ್ತೆಯಾದ ಯುವತಿಯಾಗಿದ್ದು, ಮದುವೆಯ ಹಿಂದಿನ ದಿನ ಮೆಹಂದಿ ಹಾಕಿಸಿಕೊಂಡು ಬರುವೆ ಎಂದು ಮನೆಯಲ್ಲಿ ಹೇಳಿ ಬ್ಯೂಟಿ ಪಾರ್ಲರ್ ಗೆ ಹೋಗಿದ್ದಳು. ಆದರೆ ತಡರಾತ್ರಿಯಾದರೂ ಆಕೆಯು ಮನೆಗೆ ವಾಪಾಸಾಗಿಲ್ಲ. ಕಳೆದ ಏಪ್ರಿಲ್ 15 ರಂದು ಈ ಒಂದು ಉಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಏಪ್ರಿಲ್ 16 ರಂದು ಮದುವೆಯು ನಡೆಯಬೇಕಿತ್ತು. ಆದರೆ ಒಂದು ದಿನ ಮುಂಚೆಯೇ ಅಂದರೆ ಏಪ್ರಿಲ್ 15 ರಂದು ಈ ಯುವತಿಯು ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ಆಕೆಯ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಕೂಡ ಸ್ವಿಚ್ ಆಫ್ ಎಂದು ಬಂದಿದೆ. ಮದುವೆಗೆ ಒಂದು ದಿನ ಇರುವಾಗಲೇ ಯುವತಿಯು ನಾಪತ್ತೆಯಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಮನೆಯವರು ಪಲ್ಲವಿಯ ಒಪ್ಪಿಗೆಯ ಮೇರೆಗೆ ಈ ಮದುವೆ ನಿಶ್ಚಯ ಮಾಡಿದ್ದರು.ಯುವಕನ ಜೊತೆಗೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಸೇರಿದಂತೆ ಮೆಹಂದಿ ಪಾರ್ಟಿ ಎಲ್ಲವೂ ಅದ್ದೂರಿಯಾಗಿಯೇ ನಡೆದಿತ್ತು.ಹೀಗಿರುವಾಗ ಮದುವೆಯ ಹಿಂದಿನ ದಿನವೇ ವಧು ನಾಪತ್ತೆಯಾಗಿರುವುದರಿಂದ ನಡೆಯಬೇಕಿದ್ದ ಮದುವೆಯು ನಿಂತು ಹೋಗಿದೆ.ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.