ಮಂಗಳೂರು : ಯುವತಿ ಎಂದು ಭಾವಿಸಿ ಕಾಮುಕನೊಬ್ಬ ಯುವಕನಿಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ. ಅಲ್ಲದೇ ರಾತ್ರಿ ವೇಳೆ ನಗ್ನ ವಿಡಿಯೋ ಕಾಲ್ ಮಾಡುವಂತೆ ಕೂಡ ಒತ್ತಾಯಿಸಿದ್ದಾನೆ. ಇದೀಗ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೊಲ್ನಾಡು ಗ್ರಾಮದ ಕುಡ್ತಮುಗೇರಿನಲ್ಲಿ ನಡೆದಿದೆ.
ಧರ್ಮದೇಟು ತಿಂದ ಕಾಮುಕ ಕನ್ಯಾನದ ಪಂಜಾಜೆ ನಿವಾಸಿ ಸವಾದ್(20) ಎಂದು ತಿಳಿದುಬಂದಿದೆ. ಸಾವದ್ ಅಂಗಡಿಯೊಂದರಲ್ಲಿ ವಸ್ತುವೊಂದನ್ನು ಖರೀದಿಸಿ ಹಣವಿಲ್ಲವೆಂದು ಗೂಗಲ್ ಪೇ ನಂಬರ್ ಕೇಳಿದ್ದ. ಅಂಗಡಿಯಲ್ಲಿದ್ದ ಹಿಂದೂ ಯುವತಿ ತನ್ನ ನಂಬರ್ ನೀಡದೇ, ಅಂಗಡಿಯ ಮತ್ತೋರ್ವ ಯುವಕನ ನಂಬರ್ ನೀಡಿದ್ದಳು.
ಆ ಫೋನ್ ನಂಬರ್ ಯುವತಿಯದ್ದೆಂದು ಭಾವಿಸಿ ರಾತ್ರಿ ವೇಳೆ ಸಾವದ್ ಅಶ್ಲೀಲ ಸಂದೇಶ ಕಳುಹಿಸಿದ್ದ. ಈ ವೇಳೆ ಸಹೊದ್ಯೋಗಿ ಯುವಕ ಎಲ್ಲಾ ಮೆಸೇಜ್‌ಗಳಿಗೂ ಉತ್ತರಿಸಿ ಆಟವಾಡಿಸಿದ್ದ. ತಡರಾತ್ರಿ ಅಶ್ಲೀಲ ವೀಡಿಯೋಗಳನ್ನು ಕಳುಹಿಸಿದ್ದ ಸವಾದ್, ಬಳಿಕ ಯುವತಿಗೆ ನಗ್ನ ವೀಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದ್ದ. ಅಲ್ಲದೇ ನಾಳೆ ಮತ್ತೆ ಅಂಗಡಿಯತ್ತ ಬರುತ್ತೇನೆ ಎಂಬ ಸಂದೇಶವನ್ನೂ ಸವಾದ್ ಕಳುಹಿಸಿದ್ದ.
ಮರುದಿನ ಯುವತಿಯನ್ನು ಭೇಟಿಯಾಗಲು ಐಸ್‌ಕ್ರೀಂ, ಚಾಕಲೇಟ್ ಹಿಡಿದುಕೊಂಡು ಬಂದಿದ್ದ ಸವಾದ್, ಅಂಗಡಿಗೆ ನುಗ್ಗಿ ಯುವತಿಯ ಬಳಿ ಮಾತನಾಡಲು ಮುಂದಾದಾಗ ಆಕೆ ಕಿರುಚಿದ್ದಾಳೆ. ಈ ವೇಳೆ ಮೊದಲೇ ತಯಾರಾಗಿ ನಿಂತಿದ್ದ ಹಿಂದೂ ಯುವಕರು ಸವಾದ್‌ಗೆ ಧರ್ಮದೇಟು ನೀಡಿ, ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.