ಮಂಗಳೂರು : ಫ್ಯುಯಲ್ ಬಂಕ್ ನಲ್ಲಿ ಸೂಪರ್ ವೈಸರ್ಆಗಿ ಕೆಲಸ ಮಾಡುವ ಸಿಬ್ಬಂದಿ ಒಬ್ಬ, ಫ್ಯುಯಲ್ ಬಂಕ್ ಕ್ಯೂ ಆರ್ ಕೋಡ್ ಬದಲು ಮಾಡಿ, ತನ್ನ ವೈಯಕ್ತಿಕ ಬ್ಯಾಂಕ್ ಖಾತೆ ಕ್ಯೂ ಆರ್ ಕೋಡ್ ಇರಿಸಿ ಸುಮಾರು 58 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹೌದು ಎರಡು ವರ್ಷದಲ್ಲಿ ಆರೋಪಿ ಮೋಹನ್ ದಾಸ್ ಎನ್ನುವವನು 58 ಲಕ್ಷ ದೋಚಿದ್ದಾನೆ. ಫ್ಯುಯಲ್ ಬಂಕ್ ನ ಸೂಪರ್ವೈಸರ್ ಆಗಿದ್ದ ಮೋಹನ್ದಾಸ್ ಈ ಕೃತ್ಯ ಎಸಗಿದ್ದಾನೆ. ಎರಡು ವರ್ಷದ ಬಳಿಕ ಆರೋಪಿಯ ಕೃತ್ಯ ಇದೀಗ ಬಯಲಾಗಿದೆ. ಮಂಗಳೂರಿನ ಬಜ್ಪೆ ನಿವಾಸಿ ಮೋಹನ್ ದಾಸ್ ಲಕ್ಷಾಂತರ ರು ವಂಚನೆ ಎಸೆಗಿದ್ದಾನೆ.
ರಿಲಯನ್ಸ್ ಔಟ್ಲೆಟ್ ಫ್ಯುಯಲ್ ಬಂಕ್ ನಲ್ಲಿ ಈ ಘಟನೆ ನಡೆದಿದ್ದು, ಎರಡು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಗ್ರಾಹಕರಿಂದ ಮೋಹನ್ ದಾಸ್ ಖಾತೆಗೆ ಹಣ ವರ್ಗಾವಣೆ ಆಗುತ್ತಿತ್ತು. ಕಳೆದ 15 ವರ್ಷದಿಂದ ಮೋಹನ್ ದಾಸ್ ಸೂಪರ್ವೈಸರ್ ಆಗಿ ಫ್ಯುಯಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ.ಹಣಕಾಸು ನಿರ್ವಹಣೆ ಸಹ ಈತನ ನಿಯಂತ್ರಣದಲ್ಲಿ ಇರುತ್ತಿತ್ತು. ಸದ್ಯ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.