ಮಂಗಳೂರು : ಇತ್ತೀಚಿಗೆ ಅಗ್ನಿಯ ಅವಘಡಗಳು ಸಾಕಷ್ಟು ಹೆಚ್ಚಾಗುತ್ತಿದ್ದು, ಇದೀಗ ಮಂಗಳೂರು ನಗರದ ಬಂದರಿನ ಜಿ ಎಂ ರಸ್ತೆಯ ಮನೆಯಲ್ಲಿ ಶನಿವಾರ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಕುರಿತಂತೆ ವರದಿಯಾಗಿದೆ.
‘ಏರ್ ಇಂಡಿಯಾ’ದಲ್ಲಿ ಭಾರೀ ನೇಮಕಾತಿ : 5,700 ಹೊಸ ಉದ್ಯೋಗಿಗಳು ಕಂಪನಿಗೆ ಸೇರ್ಪಡೆ
ಹೌದು ಮಂಗಳೂರು ನಗರದ ಬಂದರಿನ ಜಿ ಎಂ ರಸ್ತೆಯ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಹೊತ್ತಿ ಉರಿದಿದೆ. ಮನೆಯಲ್ಲಿದ್ದ ಹಲವಾರು ವಸ್ತುಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಗ್ನಿಯ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಹೆತ್ತ ತಾಯಿಯಿಂದಲೇ ಮಗನಿಗೆ ‘ಕಳ್ಳತನದ’ ಟ್ರೇನಿಂಗ್ : ಇಬ್ಬರ ಕೈಗೆ ಕೋಳ ತೊಡಿಸಿದ ಖಾಕಿ
ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಮನೆಯವರು ಹೊರಗೆ ಬಂದು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಪಾಂಡೇಶ್ವರ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಸಾಧ್ಯತೆಇದೆ ಎಂದು ಅಗ್ನಿ ಶಾಮಕ ದಳದವರು ಅಭಿಪ್ರಾಯಪಟ್ಟಿದ್ದಾರೆ.