ಮಂಗಳೂರು: ಬುರ್ಖಾ ಧರಿಸಿ ಬಾಲಿವುಡ್ ನ ಜನಪ್ರಿಯ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವ ವಿಡಿಯೋ ತುಣುಕು ವೈರಲ್ ಆದ ಹಿನ್ನೆಲೆಯಲ್ಲಿ ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. 17 ಸೆಕೆಂಡುಗಳ ಈ ಡ್ಯಾನ್ಸ್ ಕ್ಲಿಪ್ ಅನ್ನು “ಅನುಚಿತ ಮತ್ತು ಅಶ್ಲೀಲ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕರೆದ ನಂತರ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಂಡಿದೆ.
ಬುಧವಾರ, ವಿದ್ಯಾರ್ಥಿಗಳ ಕಾರ್ಯಕ್ರಮದ ಸಮಯದಲ್ಲಿ, ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ವೇದಿಕೆಗೆ ಬಂದು ಹಾಡಿಗೆ ನೃತ್ಯ ಮಾಡಲು ಪ್ರಾರಂಭಿಸಿದರು ಎನ್ನಲಾಗಿದೆ. ಬುಧವಾರ ತಡರಾತ್ರಿ ಈ ನೃತ್ಯ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಲು ಪ್ರಾರಂಭಿಸಿದ ತಕ್ಷಣ, ಅನೇಕರು ಇದನ್ನು “ಬುರ್ಖಾ ಜೋಕ್” ಅಂತ ಕರೆಯುತ್ತಿದ್ದರು. ಇದೇ ವೇಳೇ ಈ ನೃತ್ಯವು ಅನುಮೋದಿತ ಕಾರ್ಯಕ್ರಮದ ಭಾಗವಲ್ಲ ಮತ್ತು ವಿಚಾರಣೆಯವರೆಗೆ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಕಾಲೇಜು ಟ್ವೀಟ್ ಮಾಡಿದೆ.