ಮಂಗಳೂರು: ನಗರದ ಕೋಟೆಕಾರ್ ಬ್ಯಾಂಕ್ ನಲ್ಲಿ ನಡೆದಿದ್ದಂತ ದರೋಡೆ ಸಂಬಂಧ ಮೂವರು ದರೋಡೆಕೋರರನ್ನು ಪೊಲೀಸರು ಬಂದಿಸಿದ್ದಾರೆ. ಅಲ್ಲದೇ ಚೀಲದಲ್ಲಿ ಅವರು ದರೋಡೆ ಮಾಡಿದ್ದಂತ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿದಂತ ಮಂಗಳೂರು ನಗರ ಆಯುಕ್ತ ಅನುಪಮ್ ಅಗರ್ವಾಲ್ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆಸಿ ರೋಡ್ ನಲ್ಲಿದ್ದಂತ ಕೋಟೆಕಾರ್ ಬಳಿಯ ಬ್ಯಾಂಕ್ ನಿಂದ ಜನವರಿ.17ರಂದು ದರೋಡೆ ನಡೆಸಲಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು ಎಂದರು.
ದರೋಡೆಕೋರರು ಬಾಂಬೆಯಿಂದ ಕಾರು ಖರೀದಿ ತಂದಿದ್ದರು. ಅವರನ್ನು ಪತ್ತೆ ಹಚ್ಚಿ ಅವರ ಬಳಿಯಿದ್ದಂತ ಹಣ, ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ. ಚೀಲದಲ್ಲಿ ಅವರು ದರೋಡೆ ಮಾಡಿದ್ದಂತ ಹಣ ಇರಿಸಿದ್ದರು. ಅದನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಮೂವರು ದರೋಡೆಕೋರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದರು.
ಆರೋಪಿಗಳು ತಮಿಳುನಾಡಿನ ತಿರುವೆನೆಲ್ವಿಯವರು ಆಗಿದ್ದಾರೆ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಅವರನ್ನು ತಮಿಳುನಾಡಿನಲ್ಲೇ ಬಂಧಿಸಿರುವುದಾಗಿ ಹೇಳಿದರು.
KSOUದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪ್ರವೇಶಾತಿ ಪಡೆದವರಿಗೆ ಮಹತ್ವದ ಮಾಹಿತಿ
ನೀವು ‘ತೊದಲುವಿಕೆ ಸಮಸ್ಯೆ’ಯಿಂದ ಬಳಲುತ್ತಿದ್ದೀರಾ.? ಈ ಉಚಿತ ಕಾರ್ಯಾಗಾಲದಲ್ಲಿ ಭಾಗವಹಿಸಿ, ತೊಂದ್ರೆ ಕ್ಲಿಯರ್