ಮಂಗಳೂರು : ನಗರದ ಬಲ್ಮಠ ಬಳಿಯ ಮಂಗಳೂರು ನರ್ಸಿಂಗ್ ಹೋಮ್ ಮುಂಭಾಗದ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಈಗಾಗಲೇ ರಾಜ್ ಕುಮಾರ್ ಎನ್ನುವ ಓರ್ವನನ್ನು ರಕ್ಷಣೆ ಮಾಡಲಾಗಿದ್ದು, ಇದೀಗ ಸತತ 6 ಗಂಟೆಗಳ ಕಾಲ ಚಂದನ್ ಕುಮಾರ್ ಎನ್ನುವ ಮತ್ತೊರ್ವ ಕಾರ್ಮಿಕನನ್ನು ಸಿಬ್ಬಂದಿಗಳು ಹೊರ ತೆಗೆದಿದ್ದಾರೆ.
ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಕಾರ್ಯಾಚರಣೆ ನಡೆಸುತ್ತಿದ್ದು, ಕಾರ್ಮಿಕರ ಪ್ರಾಣ ಉಳಿಸಲು ಬೆಳಿಗ್ಗೆಯಿಂದ ಹರಸಾಹಸ ಪಡುತ್ತಿದ್ದರು. ಮಣ್ಣಿನಡಿ ಸಿಲುಕಿರುವ ಸಂತ್ರಸ್ತರನ್ನು ಬಿಹಾರ ಮೂಲದ ರಾಜ್ಕುಮಾರ್ ಹಾಗೂ ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ ಎಂದು ಗುರುತಿಸಲಾಗಿದೆ.
ಇಂದು ಮಂಗಳೂರಿನ ಬಲ್ಮಠ ಪ್ರದೇಶದಲ್ಲಿ ಕಾಮಗಾರಿ ವೇಳೆ ಮಣ್ಣು ಕುಸಿತ ಉಂಟಾಗಿತ್ತು. ಮಣ್ಣಿನಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇಬ್ಬರು ಕಾರ್ಮಿಕರನ್ನು ಇದೀಗ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ಸತತ 6 ಗಂಟೆ ಕಾರ್ಯಾಚರಣೆ ನಡೆಸಿ ಚಂದನ್ ಎನ್ನುವ ಕಾರ್ಮಿಕರನ್ನು ಸಿಬ್ಬಂದಿಗಳು ಇದೀಗ ಹೊರಗೆ ತೆಗೆದಿದ್ದಾರೆ.
ಹೊರಕ್ಕೆ ತೆಗೆದ ನಂತರ ಕಾರ್ಮಿಕ ಚಂದನ್ ಕುಮಾರ್ ವೈದ್ಯರು ಆತನ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಚಂದನ್ ಹೃದಯ ಭಾಗದಲ್ಲಿ ಸಿಪಿಆರ್ ಮಾಡುತ್ತಿದ್ದಾರೆ. ಸಿಪಿಆರ್ ಅಂದರೆ ಕಾರ್ಡಿಯೋ ಪಲ್ಮಾನರಿ ಪುನರುಜ್ಜೀವನ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಮತ್ತೊರ್ವ ಕಾರ್ಮಿಕರನ್ನು ಹೊರ ತೆಗೆದಿದ್ದರು ಈ ಕಾರ್ಮಿಕರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ.