ಮಂಗಳೂರು: ನಿನ್ನೆ ನಗರದಲ್ಲಿ ನಡೆದಿದ್ದಂತ ಆಟೋದಲ್ಲಿನ ಸ್ಪೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದು, ಸ್ಪೋಟದಿಂದ ಶಂಕಿತ ವ್ಯಕ್ತಿಗೆ ಗಂಭೀರ ಗಾಯಗಳಾಗಿದೆ. ಸದ್ಯ, ಆತನ ಸ್ಥಿತಿ ಗಂಭೀರವಾಗಿದೆ, ವಿಪರೀತ ಸುಟ್ಟಗಾಯವಾಗಿದ್ದರಿಂದ ಇನ್ಪೆಕ್ಷನ್ ಆಗಬಹುದು ಎಂದು ವೈದ್ಯರು ಆತನ ಜೊತೆ ಮಾತನಾಡಲು ಬಿಡುತ್ತಿಲ್ಲ, ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ, ಆಟೋ ಚಾಲಕ ಪುರುಷೋತ್ತಮ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಶಿಕುಮಾರ್ ಹೇಳಿದ್ದಾರೆ.
ಮಂಗಳೂರು ಸ್ಪೋಟ ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವು
ಮಂಗಳೂರು ಸ್ಪೋಟ ಪ್ರಕರಣ ಕ್ಷಣಕ್ಕೊಂದು ತಿರುಪು ಪಡೆಯುತ್ತಿದೆ. ಇದೀಗ ಈ ಬ್ಲಾಸ್ಟ್ ಕೇಸ್ ಸಂಬಂಧ ಶಂಕಿತ ಉಗ್ರನ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸ್ ಉನ್ನತ ಮೂಲಗಳಿಂಗ ಮಾಹಿತಿ ತಿಳಿದು ಬಂದಿದ್ದು, ಮಂಗಳೂರು ಸ್ಪೋಟಕ ಕೇಸ್ ನ ಶಂಕಿತ ವ್ಯಕ್ತಿ ಯೂನಸ್ ಖಾನ್ ಎಂದು ಹೇಳಲಾಗುತ್ತಿದೆ. ಈ ಮೊದಲು ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್ ದೊರೆತಿದ್ದ ಆತನ ಮತ್ತೊಂದು ಹೆಸರು ಯೂನಸ್ ಖಾನ್ ಎನ್ನಲಾಗುತ್ತಿದೆ.
ಆದ್ರೇ ಯೂನಸ್ ಖಾನ್ ಮಂಗಳೂರು ಆಟೋ ಬ್ಲಾಸ್ ಪ್ರಕರಣದ ಆರೋಪಿಯೋ, ಅದು ಆತನ ನಿಜವಾದ ಹೆಸರೋ ಅಥವಾ ಬೇರೆಯದ್ದೇ ಇದೆಯೋ ಎನ್ನುವ ಬಗ್ಗೆಯೂ ಮಂಗಳೂರು ಪೊಲೀಸರು ಎಲ್ಲಾ ಹಂತದಲ್ಲಿಯೂ ತನಿಖೆಯನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಖಚಿತ ಮಾಹಿತಿ ಲಭ್ಯವಾಗಬೇಕಿದೆ.
‘ಚುಮು..ಚುಮು’ ಚಳಿಯಲ್ಲಿರುವ ರಾಜ್ಯದ ಜನತೆಗೆ ಬಿಗ್ ಶಾಕ್ : ನ.22 ರಿಂದ ವರುಣನ ಆರ್ಭಟ |Rain Alert
BREAKING NEWS : ‘ಶಂಕಿತ ಉಗ್ರನಿಂದ ಬೇರೆ ಕಡೆ ಬಾಂಬ್ ಸ್ಪೋಟಿಸಲು ಸಂಚು ’ : ಎಡಿಜಿಪಿ ಅಲೋಕ್ ಕುಮಾರ್