ಮಂಗಳೂರು : ಮಂಗಳೂರಿನಲ್ಲಿ ನಿನ್ನೆ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಇದೀಗ ಶಂಕಿತ ಉಗ್ರ ಶಾರೀಖ್ ಚಿಕ್ಕಮ್ಮಳನ್ನು ವಿಚಾರಣೆಗೊಳಪಡಿಸಲಿದ್ದಾರೆ.
ಸ್ಪೋಟ ಪ್ರಕರಣದಲ್ಲಿ ಶಾರೀಖ್ ಪಾತ್ರ ಇದೆ ಎನ್ನಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ತೀರ್ಥಹಳ್ಳಿ ಪೊಲೀಸರು ಶಾರೀಖ್ ಚಿಕ್ಕಮ್ಮಳನ್ನು ಮಂಗಳೂರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ತಾಯಿ ನಿಧನದ ನಂತರ ಶಾರೀಖ್ ಚಿಕ್ಕಮ್ಮ, ಪತ್ನಿ ಹಾಗೂ ಮಕ್ಕಳ ಜೊತೆ ವಾಸವಿದ್ದನು ಎನ್ನಲಾಗಿದೆ.
ಇನ್ನೂ, ಈ ಕುರಿತು ದೇವನಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ಶಂಕಿತ ಉಗ್ರನಿಂದ ‘ಬೇರೆ ಕಡೆ ಬಾಂಬ್ ಸ್ಪೋಟಿಸುವ ಪ್ಲ್ಯಾನ್’ ಇತ್ತು, ತಪ್ಪಿ ಆಟೋದಲ್ಲಿ ಸ್ಪೋಟವಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
‘ಚುಮು..ಚುಮು’ ಚಳಿಯಲ್ಲಿರುವ ರಾಜ್ಯದ ಜನತೆಗೆ ಬಿಗ್ ಶಾಕ್ : ನ.22 ರಿಂದ ವರುಣನ ಆರ್ಭಟ |Rain Alert