ಮಂಗಳೂರು : ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿ ಸಿಗುತ್ತಿದೆ.
ಇದೀಗ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಬಯಲಾಗಿದ್ದು. ‘ಹಿಂದೂ’ ದೇವಾಲಯಗಳ ಸ್ಪೋಟಕ್ಕೆ ಉಗ್ರರು ಸ್ಕೆಚ್ ಹಾಕಿದ್ದರು ಎಂಬುದು ಬಯಲಾಗಿದೆ.. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ, ಮಂಜುನಾಥೇಶ್ವರ ದೇವಾಲಯದಲ್ಲಿ ಉಗ್ರರು ಬಾಂಬ್ ಸ್ಪೋಟಿಸುವ ಸ್ಕೆಚ್ ಹಾಕಿದ್ದರು ಎಂಬ ವಿಚಾರ ಪೊಲೀಸ್ ತನಿಖೆಯಿಮದ ಬಯಲಾಗಿದೆ.
ಶಾರೀಖ್ ಮೊಬೈಲ್ ತನಿಖೆ ನಡೆಸಿದ ಪೊಲೀಸರಿಗೆ ಈ ವಿಚಾರ ಗೊತ್ತಾಗಿದೆ. ಅದೇ ರೀತಿ ಮಂಗಳೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವನ್ನು ಕೂಡ ಸ್ಪೋಟಿಸುವ ಸ್ಕೆಚ್ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ದೇಗುಲ ಮಾತ್ರವಲ್ಲದೇ ಸಾರ್ವಜನಿಕ ಸ್ಥಳಗಳನ್ನು ಕೂಡ ಸ್ಪೋಟಿಸುವ ಸ್ಕೆಚ್ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಶಿವನ ಡಿಪಿ ಬೆನ್ನತ್ತಿದ ಪೊಲೀಸರಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಕರಾವಳಿ ಭಾಗದ ಮೂರು ದೇವಾಲಯಗಳನ್ನು ಸ್ಪೋಟಿಸುವ ಸ್ಕೆಚ್ ಹಾಕಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಹುಬ್ಬಳ್ಳಿ ಮೂಲದ ಪ್ರೇಮರಾಜ್ ಅವರ ಆಧಾರ್ ಕಾರ್ಡ್ ಬಳಸಿಕೊಂಡ ಈತ ಸಂಪೂರ್ಣವಾಗಿ ಬದಲಾಗಿದ್ದ. ಅಷ್ಟೇ ಅಲ್ಲ ತಾನೊಬ್ಬ ಪರಮ ದೈವಭಕ್ತ ಎಂದು ಬಿಂಬಿಸಲು ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್ ಸ್ಥಾಪನೆ ಮಾಡಿದ್ದ ಆದಿಯೋಗಿ ಶಿವನ ಪ್ರತಿಮೆಯನ್ನು ವಾಟ್ಸಪ್ ಡಿಪಿಯಲ್ಲಿ ಹಾಕಿದ್ದ. ಕೃತ್ಯ ನಡೆಯುವ ಮೊದಲು ಶಾರೀಕ್ ಕೇಸರಿ ಬಣ್ಣದ ಶರ್ಟ್, ಶಾಲು ಧರಿಸಿದ್ದನು ಎಂಬುದು ಬಯಲಾಗಿದೆ.
ವಿಡಿಯೋ ನೋಡಿ ಬಾಂಬ್ ಕಲಿಕೆ
ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾರೀಖ್ ಮೂಲಭೂತವಾದಿ ಗುಂಪುಗಳ ಮೆಸೇಜ್ ಮೂಲಕ ಬಾಂಬ್ ತಯಾರಿಸುವುದನ್ನು ಕಲಿತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.ಪ್ರಕರಣ ಆರೋಪಿ ಶಾರೀಖ್ ಮೆಸೇಜಿಂಗ್ ಫ್ಲಾಟ್ ಫಾರ್ಮ್ ಗಳಲ್ಲಿ ಗುಂಪುಗಳಿಂದ ಬಂದ ಸಂದೇಶಗಳ ಮೂಲಕ ಬಾಂಬ್ ತಯಾರಿಕೆಯನ್ನು ಕಲಿತಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿ ಬೀಳಿಸುವ ಮಾಹಿತಿ ಬಯಲಾಗಿದ್ದು, ಶಾರಿಖ್ ಅಸಲಿ ಮುಖ ಬಯಲಾಗಿದೆ. ಮೈಸೂರಿನ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಮೊಬೈಲ್ ರಿಪೇರಿ ತರಬೇತಿಗೆ ಸೇರಿಕೊಂಡಿದ್ದ ಶಾರೀಖ್ ವಿಧ್ವಂಸಕ ಕೃತ್ಯಗಳಿಗೆ ಸ್ಕೆಚ್ ಹಾಕಿದ್ದನು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.
ಮೈಸೂರಿನ ಶಾರಿಕ್ ಲೋಕನಾಯಕನಗರದಲ್ಲಿ ಪ್ರೇಮ್ ರಾಜ್ ಅನ್ನೋ ನಕಲಿ ಆಧಾರ್ ಕಾರ್ಡ್ ನೀಡಿ ಮೋಹನ್ ಕುಮಾರ್ ಎಂಬುವರಿಗೆ ಸೇರಿದ ರೂಮ್ ಬಾಡಿಗೆ ಪಡೆದುಕೊಂಡಿದ್ದ ಈತ ನಂತರ ಮೈಸೂರಿನ ಕೆಆರ್ ಮೊಹಲ್ಲಾದಲ್ಲಿರೋ SMM ಮೊಬೈಲ್ ರಿಪೇರಿ ಅಂಗಡಿಯಲ್ಲಿ ಮೊಬೈಲ್ ರಿಪೇರಿ ತರಬೇತಿಗೆ ಸೇರಿಕೊಂಡಿದ್ದನು ಎನ್ನಲಾಗಿದೆ.
ಆಗಾಗ ತರಬೇತಿಗೆ ಬರುತ್ತಿದ್ದ ಈತ ಕಡಿಮೆ ಅವಧಿಯಲ್ಲಿ ಮೊಬೈಕ್ ರಿಪೇರಿ ಮಾಡೋದನ್ನ ಕಲಿತಿದ್ದಾನೆ ಎನ್ನಲಾಗಿದೆ. ಪ್ರೇಮರಾಜ್ ಅನ್ನೋ ಹೆಸರಿನಲ್ಲಿ ತರಬೇತಿಗೆ ಸೇರಿಕೊಂಡ ಈತ ವಿಧ್ವಂಸಕ ಕೃತ್ಯಗಳಿಗೆ ಸ್ಕೆಚ್ ಹಾಕಿದ್ದನು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.
ಇನ್ನೂ, , ಮಂಗಳೂರಿನ ಬಾಂಬ್ ಸ್ಪೋಟದ ಬೆನ್ನಟ್ಟಿದ ಪೊಲೀಸರಿಗೆ ಹಲವು ಸ್ಪೋಟಕ ಮಾಹಿತಿ ಸಿಕ್ಕಿದೆ. ಇದೀಗ ಎಫ್ ಎಸ್ ಎಲ್ ವರದಿಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಯಲಾಗಿದೆ. ಶಂಕಿತ ಉಗ್ರ ಶಾರೀಕ್ ಬಳಿ ಇದ್ದದ್ದು ಅಂತಿಥ ಬಾಂಬ್ ಅಲ್ಲ ಎಂದು ಬಯಲಾಗಿದೆ. ಇದು ಅಂತಿಂಥ ಕುಕ್ಕರ್ ಬಾಂಬ್ ಅಲ್ಲ. ಆ ಕುಕ್ಕರ್ ಬಾಂಬ್ಗೆ ಇಡೀ ಬಸ್ಸನ್ನೇ ಸ್ಪೋಟಿಸುವ ಶಕ್ತಿ ಇತ್ತು ಎಂಬ ಸ್ಫೋಟಕ ವಿಚಾರ ಬಯಲಾಗಿದೆ. ಮಂಗಳೂರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಶೀಲನೆ ನಡೆಸಿದ ತಂಡ ಈ ಬಾಂಬ್ ಸಾಮರ್ಥ್ಯದ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಸಿದೆ.
ಪ್ಲಸ್ ಹಾಗೂ ಮೈನಸ್ ಡಿಟೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಆಗಿದೆ. . ಜೆಲ್ ಹೊತ್ತಿಕೊಂಡು ಉರಿದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿ ದಟ್ಟವಾದ ಹೊಗೆ ಬಂದಿದೆ ಎನ್ನಲಾಗಿದೆ. 3 ಲೀಟರ್ ಕುಕ್ಕರ್ ಒಳಗಡೆ ಸ್ಪೋಟಕದ ಜೆಲ್ ಇದ್ದು, ಇದರ ಜೊತೆ ಡಿಟೋನೇಟರ್, ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತು. ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದೆ.
BIG NEWS: ʻಡಿಜಿಟಲ್ ಮಾಧ್ಯಮʼ ನಿಯಂತ್ರಣಕ್ಕೆ ಶೀಘ್ರದಲ್ಲೇ ಕಾನೂನು ಜಾರಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ