ಮಂಡ್ಯ : ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕರಡಹಳ್ಳಿ ಗ್ರಾಮದ R. ಧನಂಜಯ್ ಗೆ UPSC ಪರೀಕ್ಷೆಯಲ್ಲಿ 554 ನೇ ರ್ಯಾಂಕ್ ಪಡೆದು ಈ ಮೂಲಕ IPS ಹುದ್ದೆಗೆ ಹಳ್ಳಿ ಹೈದ ಧನಂಜಯ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ.
ಮಗನ ಸಾಧನೆ ಬಗ್ಗೆ ಈಗ ತನ್ನ ಮಗ ದೇಶದ ಮನಗೆಂದು ಪೋಷಕರ ಹೆಮ್ಮೆ ಪಟ್ಟಿದ್ದು, ಊರು ಹುಡುಗನ ಸಾಧನೆ ಬಗ್ಗೆ ಗ್ರಾಮಸ್ಥರ ಹೆಮ್ಮೆ ಪಡುತ್ತಿದ್ದಾರೆ. ಸಾಧನೆಗೈದ ಊರ ಮಗನಿಗೆ ಅದ್ದೂರಿ ಸ್ವಾಗತ ಕೋರಿ ಸನ್ಮಾನ ಮಾಡಿದ್ದಾರೆ. ಹೈನುಗಾರಿಕೆಯ ಕೃಷಿ ಬದುಕಿನ ಜೀವದೊಂದಿಗೆ ಮಗನಿಗೆ ಉಜ್ವಲ ಭವಿಷ್ಯ ರೂಪಿಸಿಕೊಟ್ಟ ಧನಂಜಯ ಪೋಷಕರು, ಧನಂಜಯ್ ಗೆ ಸಚಿವ ಎನ್. ಚಲುವರಾಯಸ್ವಾಮಿ ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.








