ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಗಿಂತ ಅವರ ಪತ್ನಿ ಅನಿತಾ ಕುಮಾರಸ್ವಾಮಿಯೇ ಶ್ರೀಮಂತೆಯಾಗಿದ್ದಾರೆ. ಕುಮಾರಸ್ವಾಮಿ ಬಳಿಯಲ್ಲಿ 10,71,26,354.98 ರೂ ಚಿರಾಸ್ತಿ ಹೊಂದಿದ್ದರೇ, ಅನಿತಾ ಕುಮಾರಸ್ವಾಮಿ 90,32,28,973 ರೂ ಚಿರಾಸ್ತಿ ಹೊಂದಿದ್ದಾರೆ.
ಈ ಕುರಿತಂತೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಬಳಿಯಲ್ಲಿ 750 ಗ್ರಾಮ ಚಿನ್ನಾಭರಣವಿದ್ದು ಅದರ ಮೌಲ್ಯ 4,06,250 ಆಗಿದೆ. ಅದೇ ಅನಿತಾ ಕುಮಾರಸ್ವಾಮಿ ಬಳಿಯಲ್ಲಿ 3852.84 ಗ್ರಾಂ ಚಿನ್ನಾಭರಣವಿದ್ದು ಅವುಗಳ ಮೌಲ್ಯ 2,41,76,571 ಕೋಟಿಯಾಗಿದೆ.
ಇನ್ನೂ ಕುಮಾರಸ್ವಾಮಿ ಹತ್ರ 12.5 ಕೆಜಿ ಬೆಳ್ಳಿಯ ವಸ್ತುಗಳಿವೆ. ಅದರ ಬೆಲೆ ರೂ.9,62,500 ಆಗಿದೆ. ಅನಿತಾ ಕುಮಾರಸ್ವಾಮಿ ಬಳಿಯಲ್ಲಿ 17 ಕೆಜಿ ಬೆಳ್ಳಿ ವಸ್ತುಗಳಿದ್ದಾವೆ. ಅದರ ಬೆಲೆ ರೂ.13,09,000 ಆಗಿದೆ.
ಕುಮಾರಸ್ವಾಮಿ ಬಳಿಯಲ್ಲಿ ನಾಲ್ಕು ಕ್ಯಾರೆಟ್ ವಜ್ರಗಳಿದ್ದರೇ, ಅನಿತಾ ಬಳಿಯಲ್ಲಿ 5.91 ಕ್ಯಾರೆಜ್ ಡೈಮಂಡ್ ಇದ್ದಾವೆ.
ಆದರೂ ಅನಿತಾ ಕುಮಾರಸ್ವಾಮಿ 63.05 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದರೆ, ಕುಮಾರಸ್ವಾಮಿ ಅವರು ಬರೋಬ್ಬರಿ 19.12 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ.
ಮಂಡ್ಯ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಆಸ್ತಿ ವಿವರ
ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದ ಒಟ್ಟು ಆಸ್ತಿ- 217.21 ಕೋಟಿ.
ಕುಮಾರಸ್ವಾಮಿ ಆಸ್ತಿ- 62.82 ಕೋಟಿ
ಚರಾಸ್ತಿ- 10.71 ಕೋಟಿ
ಸ್ತಿರಾಸ್ತಿ 43.94 ಕೋಟಿ
ವಿವಿಧ ಕಡೆ ಸಾಲ 19.12ಕೋಟಿ.
6.97 ಕೋಟಿ ಹೆಚ್ಡಿಕೆ(HUF)
1.20 ಕೋಟಿ ಹೆಚ್ಡಿಕೆ(HUF)
47 ಲಕ್ಷ ಮೌಲ್ಯದ 750 ಗ್ರಾಂ ಚಿನ್ನಾಭರಣ.
9.62ಲಕ್ಷ ಮೌಲ್ಯದ 12.5ಕೆಜಿ ಬೆಳ್ಳಿ.
2.60ಲಕ್ಷ ಮೌಲ್ಯದ 4 ಕ್ಯಾರೆಟ್ ವಜ್ರ.
ಪತ್ನಿ ಅನಿತಾ ಕುಮಾರಸ್ವಾಮಿ ಆಸ್ತಿ-154.39 ಕೋಟಿ.
ಚರಾಸ್ತಿ 90.32 ಕೋಟಿ.
ಸ್ತಿರಾಸ್ತಿ 64.07 ಕೋಟಿ.
ಸಾಲ 63.05 ಕೋಟಿ.
2.41ಕೋಟಿ ಮೌಲ್ಯದ 3.8ಕೆಜಿ ಚಿನ್ನಾಭರಣ.
13 ಲಕ್ಷ ಮೌಲ್ಯದ 17 ಕೆಜಿ ಬೆಳ್ಳಿ.
33ಲಕ್ಷ ಮೌಲ್ಯದ 50 ಕ್ಯಾರೆಟ್ ಡೈಮಂಡ್.
ಲೋಕಾಯುಕ್ತ, ಕ್ರಿಮಿನಲ್, ಸಿವಿಲ್ ಪ್ರಕರಣ ಎದುರಿಸುತ್ತಿರುವ ಹೆಚ್ಡಿಕೆ.
ಲೋಕಾಯುಕ್ತದಲ್ಲಿ ವಿಚಾರಣೆ ಹಂತದಲ್ಲಿರುವ 3 ಪ್ರಕರಣಗಳು.
ಅತ್ತಿಗೆ ಭವಾನಿ ರೇವಣ್ಣರಿಂದ 3.26 ಲಕ್ಷ ರೂ ಸಾಲ.
ಪತ್ನಿ ಅನಿತಾರಿಂದ 8.5 ಕೋಟಿ ಸಾಲ ಮಾಡಿರುವ ಕುಮಾರಸ್ವಾಮಿ.
BREAKING: ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಕೇಸ್: ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು
ಭಾರತೀಯ ಪ್ರವಾಸಿಗರಿಗೆ ಜಪಾನ್ ‘ಇ-ವೀಸಾ’ ಆರಂಭ ; ಅರ್ಜಿ ಸಲ್ಲಿಸುವುದು ಹೇಗೆ.?