ಮಂಡ್ಯ : ಪಾಂಡವಪುರ ಪಟ್ಟಣದ ತನ್ನ ಮನೆಯ ಬಾತ್‍ರೂಂನಲ್ಲಿ (ಸ್ನಾನದ ಕೋಣೆ) ನಗ್ನ ಸ್ಥಿತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಶವ ಪತ್ತೆಯಾಗಿದ್ದು, ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಮೃತ ತಾಯಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪಟ್ಟಣದ ನಿವಾಸಿ ಲೇ.ಶಿವಣ್ಣರ ಪುತ್ರ ಪುತ್ರ ಟಿ.ಎಸ್.ಗಂಗಾಧರ್ (42) ಮೃತ ವ್ಯಕ್ತಿ. ತಮಿಳುನಾಡು ಮೂಲದ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮೃತ ಗಂಗಾಧರ್ ಮೂಲತಃ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದವರು. ಅದೇ ಗ್ರಾಮದ ನಿವಾಸಿ ಬಸವೇಗೌಡರ ಪುತ್ರಿ ಭವ್ಯರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗುವಿದೆ ಎಂದು ಹೇಳಲಾಗುತ್ತಿದೆ.
ಗಂಗಾಧರ್ ಹಾಗೂ ಪತ್ನಿ ಭವ್ಯ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಕೋರ್ಟ್ ಮೂಲಕ ರಾಜಿಸಂಧಾನ ಮಾಡಿಕೊಂಡು ಕಳೆದ ಆರು ತಿಂಗಳಿಂದ ಪಟ್ಟಣದ ಶಾಂತಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಮೃತ ಗಂಗಾಧರ್ ಹಾಗೂ ಪತ್ನಿ ಭವ್ಯ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಕೋರ್ಟ್ ರಾಜೀಸಂಧಾನ ಮೂಲಕ ದಂಪತಿ ಒಂದಾಗುವಂತೆ ಮಾಡಿದ್ದರು. ಕಳೆದ ಆರು ತಿಂಗಳಿಂದ ಪಟ್ಟಣದ ಶಾಂತಿನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು.
ಬುಧವಾರ ಮಧ್ಯಾಹ್ನ ಮೃತ ಗಂಗಾಧರ್ ಪತ್ನಿ ಭವ್ಯ ಮೃತರ ತಾಯಿ ಸರಸ್ವತಿಗೆ ದೂರವಾಣಿ ಕೆರೆ ಮಾಡಿ ನಿಮ್ಮ ಮಗ ಸ್ನಾನದ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಬಾಗಿಲು ತೆಗೆಯುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಸರಸ್ವತಿ ಅವರು ಬಂದು ನೋಡಿದಾಗ ಬೆತ್ತಲೆ ಸ್ಥಿತಿಯಲ್ಲಿ ಗಂಗಾಧರ್ ಬಿದ್ದಿರುವುದು ಕಂಡುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಿ ಸರಸ್ವತಿ ಅವರು ನನ್ನ ಮಗ ಗಂಗಾಧರ್ ನನ್ನು ಆತನ ಪತ್ನಿ ಭವ್ಯ, ತಂದೆ ಬಸವೇಗೌಡ, ಜಯಲಕ್ಷ್ಮಿ, ಸೋದರ ನವೀನ, ನವೀನನ ಹೆಂಡತಿ ಸೇರಿ ಕೊಲೆ ಮಾಡಿರುವ ಸಂಶಯವಿದೆ. ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೊಲೆ ಸಂಶಯದ ದೂರು ದಾಖಲಾಗಿದೆ.