Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

26,000 ಅಡಿ ಎತ್ತರಕ್ಕೆ ಹಾರಿ ಭೂಮಿಗಿಳಿದ ವಿಮಾನ ; ಭಯಭೀತರಾದ ಪ್ರಯಾಣಿಕರಿಂದ ವಿದಾಯ ಟಿಪ್ಪಣಿ, ವಿಲ್

02/07/2025 5:27 PM

ನೀವು ಇಂದು ರಾತ್ರಿ ಈ ರೀತಿ ಮಾಡಿ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರ

02/07/2025 5:27 PM

ಉಳಿತಾಯ ಖಾತೆದಾರರಿಗೆ ಬಿಗ್ ರಿಲೀಫ್ ; ‘SBI, ಕೆನರಾ’ ಬಳಿಕ ಕನಿಷ್ಠ ‘ಬ್ಯಾಲೆನ್ಸ್ ಶುಲ್ಕ’ ತೆಗೆದುಹಾಕಿದ ‘PNB’

02/07/2025 4:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುಂದಿನ ಸಾಹಿತ್ಯ ಸಮ್ಮೇಳನಗಳಿಗೆ ಮಂಡ್ಯ ರೋಲ್‌ ಮಾಡೆಲ್ ಆಗಬೇಕು: ದಿನೇಶ್ ಗೂಳಿಗೌಡ
KARNATAKA

ಮುಂದಿನ ಸಾಹಿತ್ಯ ಸಮ್ಮೇಳನಗಳಿಗೆ ಮಂಡ್ಯ ರೋಲ್‌ ಮಾಡೆಲ್ ಆಗಬೇಕು: ದಿನೇಶ್ ಗೂಳಿಗೌಡ

By kannadanewsnow0902/09/2024 6:34 PM

ಮಂಡ್ಯ: ಜಿಲ್ಲೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ, ಮುಂದೆ ನಡೆಯುವಂತಹ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನಗಳಿಗೆ ಮಂಡ್ಯ ರೋಲ್ ಮಾಡೆಲ್ ಆಗಬೇಕು. ಆ ನಿಟ್ಟಿನಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಬೇಕು ಎಂದು ಶಾಸಕರು ಹಾಗೂ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.

87ನೇ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ರಚನೆ ಮಾಡಿರುವ ಸಾಂಸ್ಕೃತಿಕ ಸಮನ್ವಯ ಸಮಿತಿಯ ಸದಸ್ಯರು, ಸಂಚಾಲಕರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಹೃದಯ ಶ್ರೀಮಂತಿಕೆಗೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ ಅತಿ ಹೆಚ್ಚು ಕಲಾಪ್ರಕಾರಗಳಿವೆ. ಸ್ಥಳೀಯ ಕಲಾವಿದರ ಜೊತೆಗೆ ಹೊರರಾಜ್ಯ, ವಿದೇಶದ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಜಿಲ್ಲೆಯ ಜನತೆಗೆ ಕಲೆಯ ರಸದೌತಣ ನೀಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಕರೆಕೊಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ. ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದರೇ ಬೆನ್ನೆಲುಬು, ಅವರೇ ಶಕ್ತಿ. ಕಲಾವಿದರ ಆಯ್ಕೆ, ಕಾರ್ಯಚಟುವಟಿಕೆಗಳಿಗೆ ಸ್ಪಷ್ಟ ರೂಪ ಕೊಡಬೇಕು. ಈ ನೆಲ, ಜಲ, ಭಾಷೆ ಹೆಸರು ವಿಶ್ವಮಟ್ಟದಲ್ಲಿ ಪಸರಿಸಲು ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.

ವೈಯಕ್ತಿಕವಾಗಿ ಯಾವುದೇ ಹೆಸರನ್ನು ಶಿಫಾರಸು ಮಾಡುವುದಿಲ್ಲ. ಕಲಾವಿದರ ಆಯ್ಕೆ, ಕಲಾವಿದರಿಗೆ ಊಟ ವಸತಿ, ಗೌರವಧನ, ಯಾವ ವೇದಿಕೆಗಳಲ್ಲಿ ಯಾವ ಕಾರ್ಯಕ್ರಮ ನಡೆಯಬೇಕು ಎಂಬುದರ ಸಂಬಂಧ 5-6 ಉಪಸಮಿತಿಗಳನ್ನು ರಚನೆ ಮಾಡಲಾಗುವುದು. ಸ್ವಯಂಸೇವೇಕರ ಅವಶ್ಯಕತೆಯಿದ್ದು ಕನ್ನಡ ಹಬ್ಬಕ್ಕೆ ಉಚಿತ ಸೇವೆ ಸಲ್ಲಿಸುವವರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಸಾಂಸ್ಕೃತಿಕ ಸಮನ್ವಯ ಸಮಿತಿ

ಉಪಾಧ್ಯಕ್ಷರು ಹಾಗೂ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಪ್ರೋ. ಜಯಪ್ರಕಾಶ್ ಗೌಡ ಅವರು ಮಾತನಾಡಿ, ಮಂಡ್ಯದ ನಾಯಕತ್ವ ಪ್ರಭಾವಶಾಲಿ. ನಾವೆಲ್ಲರೂ ಒಂದು ಎಂದು ಅರಿತು ಎಲ್ಲರನ್ನೂ ಒಳಗೊಳ್ಳಬೇಕು. ನಮ್ಮ ತನವನ್ನು ಅಳಿಸಿ ಸಾಮೂಹಿಕವಾಗಿ ಕೆಲಸ ಮಾಡಬೇಕು. ಕಲಾವಿದರಿಗೆ ಅವಮಾನ ಆಗದಂತೆ ಎಚ್ಚರ ವಹಿಸಬೇಕು. ಮಂಡ್ಯದ ಜನಪದ ಕಲೆಯಾದ ಪಟ್ಟಾ ಕುಣಿತ, ಕೋಲಾಟಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಇದೆ. ಅತಿ ಹೆಚ್ಚು ಕಲಾಪ್ರಕಾರ ಇರುವುದು ನಮ್ಮ ಜಿಲ್ಲೆಯಲ್ಲಿ. ಎಲ್ಲಾ ತಂಡಗಳಿಂದ ಅತ್ಯುತ್ತಮ ಕಲಾವಿದರನ್ನು ಆಯ್ಕೆ ಮಾಡಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಗೀತೆ ಎಲ್ಲಾ ವೇದಿಕೆಗಳಲ್ಲಿ ಮೊಳಗಬೇಕು ಎಂದರು.

ಸಭೆ ಆರಂಭಕ್ಕೂ ಮುನ್ನ ಹುಲುವಾಡಿ ರಾಮಯ್ಯ ತಂಡದಿಂದ ಕನ್ನಡ ಗೀತೆ ಗಾಯನ ಮಾಡಲಾಯಿತು. ಸಭೆಯಲ್ಲಿ ಕಲಾತಂಡಗಳ ಆಯ್ಕೆ, ಕಾರ್ಯಕ್ರಮ ಆಯೋಜನೆ, ಕಲಾವಿದರಿಗೆ ಆಹ್ವಾನ, ಗೌರವ ಸನ್ಮಾನ, ಕಲಾತಂಡಗಳಿಗೆ ಗೌರವ ಸಂಭಾವನೆ, ಊಟ, ವಸತಿ ಆಯೋಜನೆ ಕುರಿತ ವಿಷಯಗಳನ್ನು ಪ್ರಸ್ತಾಪಿಸಲಾಯಿತು.

ಸಭೆಯಲ್ಲಿ ಕಸಾಪ ಜಿಲ್ಲಾ ಸಂಚಾಲಾಕರಾದ ಮೀರಾ ಶಿವಲಿಂಗಯ್ಯ, ಸಮಿತಿ ಸದಸ್ಯ ಕಾರ್ಯದರ್ಶಿ ಉದಯ್ ಕುಮಾರ್, ಸಂಚಾಲಕರಾದ ಶಿವರಾಮೇಗೌಡ, ಗೌರವ ಕಾರ್ಯದರ್ಶಿಗಳಾದ ಕೃಷ್ಣೇಗೌಡ, ಅಪ್ಪಾಜಿ ಸೇರಿದಂತೆ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಸಮ್ಮೇಳನದ ಸಾಕ್ಷಿಗುಡ್ಡೆ

ಈ ಹಿಂದೆ ಜಿಲ್ಲೆಯಲ್ಲಿ ಎರಡು ಸಾಹಿತ್ಯ ಸಮ್ಮೇಳನ ನಡೆದರೂ ಅದರ ನೆನಪಿನ ಉಳಿಯುವಂತಹ ಯಾವುದೇ ಭವನ ನಿರ್ಮಿಸಲಿಲ್ಲ. ಈ ಬಾರಿ ನಡೆಯುವ ಸಾಹಿತ್ಯ ಸಮ್ಮೇಳನದ ಸಾಕ್ಷಿಗುಡ್ಡೆ ನಿರ್ಮಿಸಲು ಪ್ರಯತ್ನಿಸಲಾಗುತ್ತದೆ. ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 30 ಕೋಟಿ ರೂ. ಅಂದಾಜು ವೆಚ್ಚ ಸಿದ್ಧಪಡಿಸಿದೆ. ಇದರಲ್ಲಿ ಉಳಿಯುವ ಹಣವನ್ನು ಶಾಶ್ವತ ಕೆಲಸಕ್ಕೆ ಬಳಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.

ಸಭೆಯಲ್ಲಿ ಪ್ರಸ್ತಾಪವಾದ ಪ್ರಮುಖ ವಿಷಯಗಳು

ದೇಶದ ಹೊರಭಾಗದಲ್ಲಿರುವ ಮಂಡ್ಯದ ಕಲಾವಿದರಿಗೆ ಅವಕಾಶ ನೀಡಬೇಕು

ಹೊರ ರಾಜ್ಯದ ಕಲಾವಿದರಿಗೆ ಮನ್ನಣೆ ಸಿಗಬೇಕು

ಗಡಿನಾಡ ಕಲಾವಿದರಿಗೆ ಹೆಚ್ಚಿನ ಆದ್ಯತೆ ನಿಡಿ, ಮುಂಚೂಣಿಗೆ ತರುವ ಕೆಲಸವಾಗಬೇಕು

ಒತ್ತಡಕ್ಕೆ ಒಳಗಾಗಿ ಸಮಯವಕಾಶ ಕಡಿತ ಬೇಡ

ಜಿಲ್ಲೆಯ ಮೂಡಲಪಾಯ, ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಬೇಕು

ಸೋಭಾನೆಪದ, ಗೀಗಿಪದ, ನಾಟಕ ಸೇರಿದಂತೆ ಸ್ಥಳೀಯ ಕಲಾಪ್ರಕಾರ, ಕಲಾವಿದರಿಗೆ ಅವಕಾಶ ನೀಡಬೇಕು

ಬೀದಿನಾಟಕ ಕಲಾತಂಡಗಳು ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡಿ ಜನಜಾಗೃತಿ ಮಾಡಿಸಬೇಕು

ನಾಗಲ್ಯಾಂಡ್, ಮೇಘಾಲಯ ಕಲಾವಿದರಿಗೆ ಅವಕಾಶ ಕಲ್ಪಿಸಿ ಅವರ ಕಲೆಯ ರಸದೌತಣ ನೀಡಬೇಕು

ಗೌರವಧನದಲ್ಲಿ ಸಮಾನತೆ ಕಾಯ್ದುಕೊಳ್ಳಬೇಕು, ಮಹಿಳಾ ಕಲಾವಿದರಿಗೆ ಹೆಚ್ಚು ಅವಕಾಶ ಸಿಗಬೇಕು ಎಂಬುದಾಗಿ ಸೂಚಿಸಿದರು.

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ಭಾಗಶಃ ರದ್ದು, ಮಾರ್ಗ ಬದಲಾವಣೆ | South Western Railway

ಬೆಂಗಳೂರಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ: ಏಕಾಂತದಲ್ಲಿದ್ದ ಪ್ರೇಮಿಗಳಿಗೆ ಕಿರುಕುಳ, ಯುವಕನಿಗೆ ಗೂಸಾ

BREAKING : ‘ಮನಿ ಲಾಂಡರಿಂಗ್’ ಕೇಸ್ : ‘ED’ ಯಿಂದ AAP ಶಾಸಕ ‘ಅಮಾನತುಲ್ಲಾ ಖಾನ್’ ಅರೆಸ್ಟ್!

Share. Facebook Twitter LinkedIn WhatsApp Email

Related Posts

ನೀವು ಇಂದು ರಾತ್ರಿ ಈ ರೀತಿ ಮಾಡಿ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರ

02/07/2025 5:27 PM3 Mins Read

BREAKING : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದರಿಂದ ಮನನೊಂದ ಯುವಕ : ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

02/07/2025 4:41 PM1 Min Read

BREAKING: ‘IAS ಅಧಿಕಾರಿ’ಗಳನ್ನು ‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ’ಗಳನ್ನಾಗಿ ನೇಮಿಸಿ ‘ರಾಜ್ಯ ಸರ್ಕಾರ’ ಆದೇಶ

02/07/2025 4:34 PM2 Mins Read
Recent News

26,000 ಅಡಿ ಎತ್ತರಕ್ಕೆ ಹಾರಿ ಭೂಮಿಗಿಳಿದ ವಿಮಾನ ; ಭಯಭೀತರಾದ ಪ್ರಯಾಣಿಕರಿಂದ ವಿದಾಯ ಟಿಪ್ಪಣಿ, ವಿಲ್

02/07/2025 5:27 PM

ನೀವು ಇಂದು ರಾತ್ರಿ ಈ ರೀತಿ ಮಾಡಿ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರ

02/07/2025 5:27 PM

ಉಳಿತಾಯ ಖಾತೆದಾರರಿಗೆ ಬಿಗ್ ರಿಲೀಫ್ ; ‘SBI, ಕೆನರಾ’ ಬಳಿಕ ಕನಿಷ್ಠ ‘ಬ್ಯಾಲೆನ್ಸ್ ಶುಲ್ಕ’ ತೆಗೆದುಹಾಕಿದ ‘PNB’

02/07/2025 4:45 PM

BREAKING : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದರಿಂದ ಮನನೊಂದ ಯುವಕ : ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

02/07/2025 4:41 PM
State News
KARNATAKA

ನೀವು ಇಂದು ರಾತ್ರಿ ಈ ರೀತಿ ಮಾಡಿ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರ

By kannadanewsnow0902/07/2025 5:27 PM KARNATAKA 3 Mins Read

ಕಷ್ಟಪಟ್ಟು ಮಾಡಿದ ಸಾಲವನ್ನೆಲ್ಲಾ ತೀರಿಸಲಾಗದೆ ಪರದಾಡುತ್ತಿರುವವರಿಗೆ ಇಂದಿನ ಅದ್ಭುತ ದಿನ ಬಂದಿದೆ. ಇಂದು ಮಂಗಳವಾರ, ಗುರುವಾರ ಸಾಲ ಮರುಪಾವತಿಗೆ ಉತ್ತಮ…

BREAKING : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದರಿಂದ ಮನನೊಂದ ಯುವಕ : ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

02/07/2025 4:41 PM

BREAKING: ‘IAS ಅಧಿಕಾರಿ’ಗಳನ್ನು ‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ’ಗಳನ್ನಾಗಿ ನೇಮಿಸಿ ‘ರಾಜ್ಯ ಸರ್ಕಾರ’ ಆದೇಶ

02/07/2025 4:34 PM

BREAKING : ಹಾಸನದಲ್ಲಿ ಮದುವೆಯಾದ 6 ತಿಂಗಳಿಗೆ ಗೃಹಿಣಿ ಅನುಮಾನಾಸ್ಪದವಾಗಿ ಸಾವು!

02/07/2025 4:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.