ಮಂಡ್ಯ : ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟನಿ, ಗೆಜ್ಜಲಗೆರೆ, ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆ. ಇದರ ಆಡಳಿತ ಮಂಡಳಿ ನಿರ್ದೇಶಕರುಗಳನ್ನು ಮುಂದಿನ 5 ವರ್ಷಗಳ ಅವಧಿಗೆ ಆಯ್ಕೆ ಮಾಡಿ ಆಡಳಿತ ಮಂಡಳಿ ರಚಿಸಲು ಚುನಾವಣಾ ವೇಳಾಪಟ್ಟಿಯನ್ನು ಅಪರ ಜಿಲ್ಲಾಧಿಕಾರಿ ಬಿ ಸಿ ಶಿವಾನಂದಮೂರ್ತಿ ಅವರು ಪ್ರಕಟಿಸಿದ್ದಾರೆ.
ಚುನಾವಣೆಯಲ್ಲಿ ಸ್ಫರ್ಧಿಸಲು ಇಚ್ಛಿಸುವಂತಹ ಅಭ್ಯರ್ಥಿಗಳು ನಾಮಪತ್ರವನ್ನು ಜನವರಿ 18 ರಿಂದ 25 ರವರೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಪರ ಜಿಲ್ಲಾಧಿಕಾರಿಗಳ ಕಚೇರಿ ಕಾರ್ಯಾಲಯ, ಮಂಡ್ಯ ಇಲ್ಲಿ ಪಡೆದು ರಿಟರ್ನಿಂಗ್ ಅಧಿಕಾರಿಗಳಿಗೆ ಸಲ್ಲಿಸುವುದು. ನಾಮಪತ್ರ ಸಲ್ಲಿಸಲು ಜನವರಿ 25 ಕಡೆಯ ದಿನಾಂಕವಾಗಿರುತ್ತದೆ. ಜನವರಿ 26 ರಂದು ಮದ್ಯಾಹ್ನ 12 ಗಂಟೆಗೆ ನಾಮ ಪತ್ರಗಳ ಪರಿಶೀಲನೆ ನಡೆಯಲಿದೆ. ಜನವರಿ 26 ರಂದು ಮಧ್ಯಾಹ್ನ 3 ಗಂಟೆಗೆ ಕ್ರಮಬದ್ದವಾದ ನಾಮ ನಿರ್ದೇಶಿತ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಕಟಿಸಲಾಗುವುದು.
ಜನವರಿ 27 ರಂದು ಬೆಳಿಗ್ಗೆ 11 ರಿಂದ 3 ಗಂಟೆಯವರೆಗೆ ನಾಮಪತ್ರವನ್ನು ಹಿಂಪಡೆಯಬಹುದಾಗಿದ್ದು, ಜನವರಿ 27 ರಂದು ಮಧ್ಯಾಹ್ನ 3 ಗಂಟೆಯ ನಂತರ ಅಂತಿಮ ಉಮೇದುವಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಗೆಜ್ಜಲಗೆರೆಯ ಮನ್‌ಮುಲ್ ಕಚೇರಿಯ ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಲಾಗುವುದು. ಜನವರಿ 27 ರಂದು ಮದ್ಯಾಹ್ನ 3 ಗಂಟೆಯ ನಂತರ ಅರ್ಹ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗುವುದು. ಜನವರಿ 29 ರಂದು ಬೆಳಿಗ್ಗೆ 11 ಗಂಟೆಗೆ ಚುನಾವಣೆಗೆ ಸ್ಫರ್ಧಿಸಲು ಸಿಂಧುತ್ವ ಹೊಂದಿರುವ ಉಮೇದುವಾರರ ಪಟ್ಟಿಯನ್ನು ಚಿಹ್ನೆ ಸಮೇತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗುವುದು.
ಫೆಬ್ರವರಿ 2 ರಂದು ಭಾನುವಾರ ಬೆಳಿಗ್ಗೆ 9.00 ಗಂಟೆಯಿAದ ಸಾಯಂಕಾಲ 4 ಗಂಟೆಯವರೆಗೆ ಮೈಶುಗರ್ ಪ್ರೌಢಶಾಲೆ, ಮೈಸೂರು-ಬೆಂಗಳೂರು ರಸ್ತೆ, ಸ್ವರ್ಣಸಂದ್ರ, ಮಂಡ್ಯ-571401 ಇಲ್ಲಿ ಮತದಾನ ನಡೆಯಲಿದೆ. ಮತದಾನ ಮುಕ್ತಾಯದ ನಂತರ ಮತ ಎಣಿಕೆಯನ್ನು ಫೆಬ್ರವರಿ 2 ರಂದೇ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ ಸಿ ಶಿವಾನಂದಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BREAKING: ‘ಸರ್ಕಾರಿ ನೌಕರ’ರ ‘ಗಳಿಕೆ ರಜೆ’ ಆಧ್ಯರ್ಪಿಸಿ ನಗದೀಕರಣಕ್ಕೆ ‘ರಾಜ್ಯ ಸರ್ಕಾರ’ ಗ್ರೀನ್ ಸಿಗ್ನಲ್
BREAKING:ದೆಹಲಿಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ | Ayushman Bharat