Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಫೋನ್ ಸ್ಟೋರೇಜ್ ಫುಲ್ ಆಗಿದೆಯೇ? ಚಿಂತೆ ಬಿಡಿ! ಜಾಗ ಖಾಲಿ ಮಾಡಲು ಇಲ್ಲಿವೆ 5 ಸುಲಭ ಮಾರ್ಗಗಳು

27/04/2026 6:30 AM

ಇಂದು ಭಾರತ-ನ್ಯೂಜಿಲೆಂಡ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ದ್ವಿಪಕ್ಷೀಯ ವಹಿವಾಟು ದುಪ್ಪಟ್ಟುಗೊಳಿಸುವ ಗುರಿ!

27/04/2026 6:20 AM

ಇರಾನ್‌ನ ನೂತನ ಸರ್ವೋಚ್ಚ ನಾಯಕನೂ ಸತ್ತಿದ್ದಾರೆಯೇ? ಮೃತ ನಾಯಕರ ಸಾಲಿನಲ್ಲಿ ಮೊಜ್ತಬಾ ಚಿತ್ರ: ಹೆಚ್ಚಿದ ಅನುಮಾನ!

27/04/2026 6:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯ: ರೈತ ಮಹಿಳೆಗೆ 97 ಲಕ್ಷ ರೂ ವೆಚ್ಚದ ಕಬ್ಬು ಕಟಾವು ಯಂತ್ರ ಸಚಿವ ಚಲುವರಾಯಸ್ವಾಮಿ ವಿತರಣೆ
KARNATAKA

ಮಂಡ್ಯ: ರೈತ ಮಹಿಳೆಗೆ 97 ಲಕ್ಷ ರೂ ವೆಚ್ಚದ ಕಬ್ಬು ಕಟಾವು ಯಂತ್ರ ಸಚಿವ ಚಲುವರಾಯಸ್ವಾಮಿ ವಿತರಣೆ

By kannadanewsnow0918/11/2024 7:36 PM

ಮಂಡ್ಯ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮದ್ದೂರು ತಾಲ್ಲೂಕಿನ ಜ್ಯೋತಿ ಎಂಬ ರೈತ ಮಹಿಳೆ 97 ಲಕ್ಷ ರೂ ವೆಚ್ಚದ ಕಬ್ಬು ಕಟಾವು ಯಂತ್ರವನ್ನು ಹಾರ್ವೆಸ್ಟ್ ಹಬ್ ಎಂಬ ಯೋಜನೆಯಡಿ ಖರೀದಿಸಿದ್ದು 39,86,000 ರೂ ಸಬ್ಸಿಡಿ ಸರ್ಕಾರದಿಂದ ದೊರೆಯುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಇಂದು ಮದ್ದೂರು ತಾಲ್ಲೂಕಿನ ಬೆಳತೂರು ಗೇಟ್(ಮದ್ದೂರು-ಕೊಪ್ಪ ರಸ್ತೆ) ನಲ್ಲಿ ನಡೆದ ಕಬ್ಬು ಕಟಾವು ಯಂತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೃಷಿಯನ್ನು ಮಾಡಲು ಜಿಲ್ಲೆಯಲ್ಲಿ ಬಹಳ ಜನ ಆಸಕ್ತಿ ಹೊಂದಿದ್ದೀರ. ಬಹಳಷ್ಟು ಜನ ಕೃಷಿ ಇಲಾಖೆಯಿಂದ ದೊರೆಯುವ ಸಂಪನ್ಮೂಲ, ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದೀರ. ಜೊತೆಗೆ ಕೃಷಿ ಬಗ್ಗೆ ತರಬೇತಿ ಪಡೆಯುವುದು, ಸಂಶೋಧನ ಕೇಂದ್ರದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ. ಅಮೇರಿಕ ಹಾಗೂ ಇನ್ನಿತರೆ ದೇಶಗಳಲ್ಲಿ ಕೃಷಿ ಪದ್ದತಿಯು ಸಂಪೂರ್ಣವಾಗಿ ಯಂತ್ರದಿಂದ ಕೂಡಿರುವುದನ್ನು ನೋಡಿದಾಗ ನಮ್ಮ ದೇಶದ ರೈತರು ಕೃಷಿಯಲ್ಲಿ ಬಹಳ ಆಸಕ್ತಿಯಿಂದ ಯಂತ್ರಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಹಲವಾರು ಕಾರಣಗಳಿಂದ ಕೃಷಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಬೇಕಿದೆ. ಇದರ ಬಗ್ಗೆ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನಡೆಸುವ ತರಬೇತಿಯಲ್ಲಿ ಹೆಚ್ಚು ಜನರು ಭಾಗವಹಿಸಬೇಕು ಎಂದರು.

97 ಲಕ್ಷ ರೂ ಗಳ ಕಬ್ಬು ಕಟಾವು ಯಂತ್ರವನ್ನು ಪರಿಶಿಷ್ಟ ಜಾತಿ ಪಂಗಡದವರಿಗೆ ಇದೆ ಯಂತ್ರ ನೀಡಿದರೆ 49 ಲಕ್ಷ ರೂ ಸಬ್ಸಿಡಿ ನೀಡಲಾಗುವುದು. ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸರ್ಕಾರ ಸದಾ ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ರೈತರಿಗೆ ಹೆಚ್ಚಿನ ಇಳುವಾರಿ ಹಾಗೂ ಲಾಭ ಬರಲಿದೆ. ಇದನ್ನು ರೈತರು ಮನಗಂಡು ಹೆಚ್ಚು ಉಪಯೋಗಿಸಿಕೊಳ್ಳಬೇಕು ಎಂದರು.

ಕಬ್ಬು ಕಟಾವು ಯಂತ್ರವನ್ನು ಬಾಡಿಗೆಗೆ ನೀಡಿ ಕೆಲವು ವರ್ಷಗಳ ನಂತರ ಯಂತ್ರದಿಂದ ಲಾಭ ಬರಲಿದೆ ಎಂದರು.

ಈ ಯಂತ್ರವನ್ನು ಬೆಳಗಾವಿಯಲ್ಲಿ ಹೆಚ್ಚು ಜನರು ಬಳಸುತ್ತಿದ್ದಾರೆ. ಮೊದಲ ಬಾರಿಗೆ ಬೆಳಗಾವಿಯಲ್ಲಿ 20 ಯಂತ್ರವನ್ನು ‌ನೀಡಲಾಗಿತ್ತು. ಈ ಬಾರಿ ಕಬ್ಬು ಕಟಾವು ಯಂತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು, 100 ಯಂತ್ರಗಳಿಗೆ 500 ಅರ್ಜಿಗಳು ಬಂದಿವೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕಟಾವಿಗಾಗಿ ಹೊರ ಜಿಲ್ಲೆಯಿಂದ ಅವರಿಗೆ ಮುಂಗಡ ನೀಡಿ ಕರೆತರಲಾಗುತ್ತದೆ. ಇಂತಹ ಯಂತ್ರ ಖರೀದಿಗೆ ರೈತರನ್ನು ಸಕ್ಕರೆ ಕಾರ್ಖಾನೆಗಳು ಪ್ರೋತ್ಸಾಹಿಸಬೇಕು ಎಂದರು.

ಭತ್ತ ಹಾಗೂ ರಾಗಿ ಬೆಳೆಯ ನಾಟಿಯನ್ನು ಮಾಡುವ ರೈತರು ನೀರನ್ನು ಸಮ ಪ್ರಮಾಣದಲ್ಲಿ ಹಾಯಿಸಬೇಕು. ನೀರನ್ನು ಹೆಚ್ಚಾಗಿ ಹಾಯಿಸಿದಲ್ಲಿ ಬೆಳೆ ಇಳುವರಿ ಕಡಿಮೆಯಾಗುವುದು. ವೈಜ್ಞಾನಿಕ ವಿಧಾನವನ್ನು ತಿಳಿದು ಕೃಷಿ ಮಾಡುವುದು ಸೂಕ್ತ. ಭತ್ತ ರಾಗಿಯ ಬಿತ್ತನೆ, ಗೊಬ್ಬರ ಹಾಗೂ ಔಷಧಿಯನ್ನು ಸರ್ಕಾರದಿಂದ ರೈತರಿಗೆ ಯಾವುದೇ ಕೊರತೆ ಬಾರದಂತೆ ನೀಡಲಾಗುತ್ತಿದೆ. ಇನ್ನೂ ಹಲವಾರು ಹೊಸ ಕಾರ್ಯಕ್ರಮಗಳನ್ನು ರೈತರಿಗೆ ನೀಡುವ ಸಲುವಾಗಿ ಸರ್ಕಾರವು ಚಿಂತಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ರವಿಕುಮಾರ್, ಮದ್ದೂರು ಶಾಸಕ ಉದಯ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

ವರದಿ: ಗಿರೀಶ್ ರಾಜ್, ಮಂಡ್ಯ

BREAKING : ಕೊಪ್ಪಳದಲ್ಲಿ ಜಿಲ್ಲಾಸ್ಪತ್ರೆಯ ಬಳಿಯೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನರ್ಸಿಂಗ್ ಆಫೀಸರ್! – Kannada News | India News | Breaking news | Live news | Kannada | Kannada News | Karnataka News | Karnataka News

BREAKING: ಚಿರತೆ ದಾಳಿಯಲ್ಲಿ ಮಹಿಳೆ ಸಾವು ಕೇಸ್: ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ – ACF ಘೋಷಣೆ – Kannada News | India News | Breaking news | Live news | Kannada | Kannada News | Karnataka News | Karnataka News

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸೊರಬದ ಉಳವಿಯಲ್ಲಿ ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಮುರಿದು ಬಿದ್ದ ವಿದ್ಯುತ್ ಕಂಬಗಳು

26/04/2026 7:26 PM4 Mins Read

SHOCKING : ಮಡಿಕೇರಿಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು, ಸರ್ಕಾರಿ ಶಿಕ್ಷಕಿ ಆತ್ಮಹತ್ಯೆಗೆ ಶರಣು!

26/04/2026 1:34 PM1 Min Read

ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ, ಸ್ಥಳದಲ್ಲೇ ಸಾವು!

26/04/2026 1:20 PM1 Min Read
Recent News

​ಫೋನ್ ಸ್ಟೋರೇಜ್ ಫುಲ್ ಆಗಿದೆಯೇ? ಚಿಂತೆ ಬಿಡಿ! ಜಾಗ ಖಾಲಿ ಮಾಡಲು ಇಲ್ಲಿವೆ 5 ಸುಲಭ ಮಾರ್ಗಗಳು

27/04/2026 6:30 AM

ಇಂದು ಭಾರತ-ನ್ಯೂಜಿಲೆಂಡ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ದ್ವಿಪಕ್ಷೀಯ ವಹಿವಾಟು ದುಪ್ಪಟ್ಟುಗೊಳಿಸುವ ಗುರಿ!

27/04/2026 6:20 AM

ಇರಾನ್‌ನ ನೂತನ ಸರ್ವೋಚ್ಚ ನಾಯಕನೂ ಸತ್ತಿದ್ದಾರೆಯೇ? ಮೃತ ನಾಯಕರ ಸಾಲಿನಲ್ಲಿ ಮೊಜ್ತಬಾ ಚಿತ್ರ: ಹೆಚ್ಚಿದ ಅನುಮಾನ!

27/04/2026 6:15 AM

ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರನ ಅಂತ್ಯ: ಹಫೀಜ್ ಸಯೀದ್ ಆಪ್ತ ಶೇಖ್ ಯೂಸುಫ್ ಅಫ್ರಿದಿ ಗುಂಡಿಕ್ಕಿ ಹತ್ಯೆ

27/04/2026 6:13 AM
State News
KARNATAKA

ಶಿವಮೊಗ್ಗ: ಸೊರಬದ ಉಳವಿಯಲ್ಲಿ ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಮುರಿದು ಬಿದ್ದ ವಿದ್ಯುತ್ ಕಂಬಗಳು

By kannadanewsnow0926/04/2026 7:26 PM KARNATAKA 4 Mins Read

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಕಳೆದ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ತೀವ್ರ ತರಹದ ಹಾನಿ ಉಂಟಾಗಿದೆ. ಉಳವಿಯ…

SHOCKING : ಮಡಿಕೇರಿಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು, ಸರ್ಕಾರಿ ಶಿಕ್ಷಕಿ ಆತ್ಮಹತ್ಯೆಗೆ ಶರಣು!

26/04/2026 1:34 PM

ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ, ಸ್ಥಳದಲ್ಲೇ ಸಾವು!

26/04/2026 1:20 PM

SHOCKING : ಬೆಂಗಳೂರಲ್ಲಿ ಅಮಾನವೀಯ ಕೃತ್ಯ : ಮಚ್ಚಿನಿಂದ ಬೀದಿ ನಾಯಿಯ ಮೇಲೆ ದಾಳಿ ಮಾಡಿದ ವ್ಯಾಪಾರಿ!

26/04/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.