ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಕಗ್ಗಂಟು ಮುಂದುವರೆದಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯ ನಂತ್ರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಇಂದು ಸಂಜೆಯೊಳಗೆ ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಹೆಸರು ಘೋಷಣೆ ಮಾಡೋದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದರು. ಆದ್ರೇ ಅದು ಸಾಧ್ಯವಾಗದ ಕಾರಣ, ನಾಳೆ ಜೆಡಿಎಸ್ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿದೆ.
ಈ ಬಗ್ಗೆ ಜೆಡಿಎಸ್ ಪಕ್ಷದಿಂದ ಮಾಹಿತಿ ನೀಡಲಾಗಿದ್ದು, ನಾಳೆ ಬೆಂಗಳೂರಿನ ಜೆಪಿ ನಗರದಲ್ಲಿರುವಂತ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ನಿವಾಸದಲ್ಲಿ ಬೆಳಿಗ್ಗೆ 11 ಗಂಟೆಗೆ ಜಾತ್ಯಾತೀತ ಜನತಾದಳ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ಕರೆಯಲಾಗಿದೆ ಎಂದಿದ್ದಾರೆ.
ಕೋರ್ ಕಮಿಟಿ ಸಭೆಯು ಅಧ್ಯಕ್ಷರಾದಂತ ಜಿ.ಟಿ ದೇವೇಗೌಡರ ನೇತೃತ್ವದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದೆ.
ನಾಳೆ ಜೆಡಿಎಸ್ ಪಕ್ಷದಿಂದ ನಡೆಯುತ್ತಿರುವಂತ ಕೋರ್ ಕಮಿಟಿ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕು ಎಂಬುದು ಪೈನಲ್ ಆಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಬಗ್ಗೆ ನಾಳೆ ಬೆಳಿಗ್ಗೆಯವರೆಗೆ ಕಾದು ನೋಡಬೇಕಿದೆ.
ಮೊದಲ ದಿನವೇ ‘SSLC ಪರೀಕ್ಷೆ’ಯಲ್ಲಿ ಸಾಮೂಹಿಕ ನಕಲು: ‘ಇಬ್ಬರು ಶಿಕ್ಷಕ’ರು ಅಮಾನತು | SSLC Exam
ಲಂಡನ್ ನಲ್ಲಿ ಕಸದ ಲಾರಿಗೆ ಸೈಕಲ್ ಡಿಕ್ಕಿ : ಭಾರತೀಯ ಮೂಲದ ‘PHD’ ವಿದ್ಯಾರ್ಥಿನಿ ಸಾವು