ಮಂಡ್ಯ: ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಮನೆಯೊಂದರಲ್ಲಿ ಒಂಟಿಯಾಗಿದ್ದಂತ ಮಹಿಳೆಯನ್ನು ಹೆದರಿಸಿದಂತ ಇಬ್ಬರು ಮುಸುಕುದಾರಿಗಳು, ಮಾರಕಾಸ್ತ್ರಗಳಿಂದ ಹೆದರಿಸಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿರುವಂತ ಘಟನೆ ನಡೆದಿದೆ.
ಹೌದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮೆಳ್ಳಹಳ್ಳಿಯಲ್ಲಿ ಹಾಡು ಹಗಲೇ ಮನೆಗೆ ನುಗ್ಗಿ ಮಹಿಳೆಯನ್ನ ಹೆದರಿಸಿ ಕಳ್ಳತನ ನಡೆಸಲಾಗಿದೆ. ಹರ್ಷಿತಾ ಎಂಬಾಕೆ ಮನೆಯಲ್ಲಿ ಒಬ್ಬರೇ ಇದ್ದುದ್ದನ್ನ ಗಮನಿಸಿದ ಇಬ್ಬರು ಮುಸುಕುದಾರಿಗಳು ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಹೆಸರಿಸಿದ್ದಾರೆ.
ಆ ಬಳಿಕ ಬೀರುವಿನಲ್ಲಿದ್ದ ಸುಮಾರು 25ಗ್ರಾಂ ಚಿನ್ನಾಭರಣ ಹಾಗೂ 1.60ಲಕ್ಷ ನಗದ ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಕೃಷ್ಣಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಹಾಗೂ ಪಿಎಸ್ಐ ಪುಟ್ಟಮಾದು ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೆ.ಎಂ.ದೊಡ್ಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
SHOCKING NEWS: ‘ನವಜಾತ ಶಿಶು’ವನ್ನೇ ಹೆದ್ದಾರಿ ಬದಿಯ ರಸ್ತೆಯಲ್ಲಿ ಬಿಸಾಡಿ ಹೋದ ‘ಪಾಪಿ ತಾಯಿ’
ರಾಜ್ಯದಲ್ಲೊಬ್ಬ ಅಪರೂಪದ ‘ಡೊಳ್ಳು ಕಲಾವಿದ’: ಇವರ ಸಾಧನೆ ಕೇಳಿದ್ರೆ ‘ನೀವೇ ಶಾಕ್’ ಆಗ್ತೀರಿ