ಬೆಂಗಳೂರು: ಮಂಡ್ಯ ಮೂಲದ ಯುವಕನ ಮತಾಂತರ ಹಾಗು ಕತ್ನಾ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ.
BREAKING NEWS: ಬೆಳಗಾವಿಯಲ್ಲಿ ಅನುಮಾನಾಸ್ಪದ ಯುವತಿ ಸಾವು; ಅತ್ಯಾಚಾರ, ಕೊಲೆ ಶಂಕೆ
ನಯಾಜ್ ಪಾಷಾ, ಹಾಜಿ ಸಾಬ್ ಬಂಧಿಸಲಾಗಿತ್ತು ಇಂದು ತಮಿಳುನಾಡಿನಲ್ಲಿ ಮಾಜಿ ಕಾರ್ಪೊರೇಟರ್ ಅನ್ಸರ್ ಪಾಷಾನನ್ನು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಈ ಹಿಂದೆ ಅತಾವುರ್ ರೆಹಮಾನ್, ಶೊಯೇಬ್ನನ್ನ ಬಂಧಿಸಿದ್ದರು. ಈ ಮೂಲಕ ಇದುವರೆಗೆ ಐವರ ಬಂಧನವಾಗಿದೆ.
BREAKING NEWS: ಬೆಳಗಾವಿಯಲ್ಲಿ ಅನುಮಾನಾಸ್ಪದ ಯುವತಿ ಸಾವು; ಅತ್ಯಾಚಾರ, ಕೊಲೆ ಶಂಕೆ
ಪ್ರಕರಣದ ಹಿನ್ನೆಲೆ?
ಶ್ರೀಧರ್ ತನಗೆ ಹಣಕಾಸಿನ ತೊಂದರೆ ಎದುರಾಗಿದೆ ಎಂಬ ಬಗ್ಗೆ ಎ ಒನ್ ಆರೋಪಿ ಅತ್ತಾವರ ರೆಹಮಾನ್ ಬಳಿ ಹೇಳಿಕೊಂಡಿದ್ದ. ನಂತರ ಆತ ಶ್ರೀಧರ್ ಎಸ್ಸಿ ಎಸ್ಟಿ ಎಂದು ತಿಳಿದು ಎ2 ಆರೋಪಿ ಅಜಿಸಾಬ್ ಎಂಬಾತನನ್ನ ಬನಶಂಕರಿಯ ಮಸೀದಿಗೆ ಕರೆದುಕೊಂಡು ಹೋಗಿ ಪರಿಚಯಿಸಿದ್ದ. ಈ ವೇಳೆ ಅಜಿಸಾಬ್ ಹಿಂದೂ ದೇವರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿ ಇವರನ್ನೆಲ್ಲಾ ದೇವರಾ? ಎಂದು ದೇವರನ್ನು ನಿಂದಿಸಿದ್ದನಂತೆ. ಸದ್ಯ ಬನಶಂಕರಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.