ಮಂಡ್ಯ : ಗಣಪತಿ ವಿಸರ್ಜನೆ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಂಡ್ಯ ನಗರದಲ್ಲೂ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಮಂಡ್ಯದಲ್ಲಿ ಪೊಲೀಸರಿಂದ ರೂಟ್ ಮಾರ್ಚ್ ಸಹ ನಡೆಸಲಾಯಿತು.ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.
ಕಳೆದ ಸಾರಿ ಗಣಪತಿ ವಿಸರ್ಜನೆ ವೇಳೆ ನಾಗಮಂಗಲದಲ್ಲಿ ಕೋಮು ಗಲಭೆ ಸಂಭವಿಸಿತ್ತು. ಈ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಹಿಂಸಾಚಾರ ನಡೆದಿತ್ತು. ಈ ಕಾರಣದಿಂದ ಈ ಬಾರಿ ಆತರಹ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ. ಮಂಡ್ಯದ ಸಂಜಯ್ ವೃತ್ತ, ಹೊಳಲು ಸರ್ಕಲ್, ಗುತ್ತಲು, ನೂರಡಿ ರಸ್ತೆ ಸೇರಿ ವಿವಿಧ ಕಡೆ ಪಥ ಸಂಚಲನ.
ಮಂಡ್ಯದಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ ನೀಡಿದ್ದು, ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನಲೆ ಪೊಲೀಸ್ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಕಳೆದ ವರ್ಷ ನಾಗಮಂಗಲ ಎರಡೂ ಕೋಮು ನಡುವೆ ಗಲಭೆ ಆಗಿತ್ತು. ಗಲಭೆಯಿಂದ ಸಾಕಷ್ಟು ನಷ್ಟವಾಗಿತ್ತು. ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾ ಮಟ್ಟ ಹಾಗೂ ನಾಗಮಂಗಲದಲ್ಲಿ ಸಭೆ ಮಾಡಲಾಗಿದೆ. ಎರಡೂ ಕಡೆಯವರು ಹಬ್ಬ ಆಚರಣೆ ಮಾಡಲು ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ನಾಗಮಂಗಲದಲ್ಲಿ ಪೊಲೀಸರು ಪಥ ಸಂಚಲನ ನಡೆಸಿ. ಸೂಕ್ಷ್ಮ ಪ್ರದೇಶದಲ್ಲಿ ಮಾರ್ಚ್ ರೂಟ್ ನಡೆಸಿ ಸಿದ್ದತೆ ಮಾಡಿಕೊಂಡಿದ್ದಾರೆ. ಜನರು ಭಯಬೀತರಾಗದೆ ಹಬ್ಬ ಆಚರಣೆ ಮಾಡಲು ಮನವಿ ಮಾಡಲಾಗಿದೆ. ಮಸೀದಿ ಮುಂದೆ ಮೆರವಣಿಗೆಗೆ ಅನುಮತಿ ಕೊಟ್ಟಿಲ್ಲ ಅನ್ನೋ ಪ್ರಶ್ನೆ ಇದೆ. ಮೆರವಣಿಗೆಗೆ ಪ್ರತಿ ಬಾರಿ ಹೋಗಿವ ಮಾರ್ಗದಲ್ಲಿ ಮೆರವಣಿಗೆಗೆ ಅವಕಾಶ. ಮಸೀದಿ ಮುಂದೆ ಹೋಗಲು ಅನುಮತಿ ಕೋರಿದ್ದರು.
ಕೋಟೆ ಗಣಪತಿ ಮೆರವಣಿಗೆ ಮಾತ್ರ ಮಸೀದಿ ಮುಂದೆ ಹೋಗಲು ಅನುಮತಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಹೊಸಬರಿಗೆ ಮಾತ್ರ ನಾವು ಅನುಮತಿ ನಿರಾಕರಿಸಿದ್ದೇವೆ. ಹಳೆ ಪದ್ದತಿಯ ಪ್ರಕಾರ ಮೆರವಣಿಗೆ ನಡೆಸಲಿ. ಗಣೇಶ ಉತ್ಸವ ಸಾಮೂಹಿಕ ಮೆರವಣಿಗೆಗೆ ಬೇಡ ಅಂತ ಹೇಳಿದ್ದೇವೆ. ಒಂದು ಬಾರಿ ಮೆರವಣಿಗೆ ಮಸೀದಿ ಮುಂದೆ ಹೋಗಿ ಮತ್ತೆ ವಾಪಸು ಬೇಡ. ಟ್ರಾಫಿಕ್ ಕಂಟ್ರೋಲ್ ಗಾಗಿ ಈ ರೀತಿಯ ಸಿದ್ದತೆ ಮಾಡಲಾಗಿದೆ.
ಎರಡೂ ಕೋಮುನವರ ನಡೂವೆ ಗಲಾಟೆ ಆಗಿತ್ತು. ಸಾಕಷ್ಟು ಜನರನ್ನ ಅರೆಸ್ಟ್ ಮಾಡಲಾಗಿದೆ. ಇವಾಗ ಎರಡೂ ಕಡೆಯವರಿಗೆ ಮನವರಿಕೆ ಆಗಿದೆ. ಸಭೆಯಲ್ಲಿ ಯಾವುದೇ ರೀತಿಯ ತಕರಾರು ಮಾಡಿಲ್ಲ. ಗಲಾಟೆ ಮಾಡುವವರ ಮೇಲೆ ನಿಗಾ ವಹಿಸಲಾಗಿದೆ. ನಾಗಮಂಗಲದಲ್ಲಿ ಸಣ್ಷ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.