ಮಂಡ್ಯ: ಜಿಲ್ಲೆಯ ಪಾಡವಪುರದಲ್ಲಿ ಗನ್ ತೋರಿಸಿ ದರೋಡೆಗೆ ಇಳಿದಂತ ಯುವಕರನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿದಿದು, ಕಂಬಕ್ಕೆ ಕಟ್ಟಿ, ಸಖತ್ ಗೂಸಾ ನೀಡಿರುವಂತ ಘಟನೆ ನಡೆದಿದೆ.
ಬೆಳಗಾಂನ ಇಬ್ಬರು ಚಿನ್ನದ ವ್ಯಾಪಾರಸ್ಥರು ಮೈಸೂರಿಗೆ ಹಣದೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಕೇರಳ ರಾಜ್ಯ ಮೂಲದ ದರೋಡೆಕೋರರು ತಮ್ಮ ಬಳಿ ಇದ್ದ ಗನ್, ಮಚ್ಚು ಹಾಗೂ ಮಾರಕಾಸ್ತ್ರದೊಂದಿಗೆ ದಾಳಿ ನಡೆಸಿ, ಇಬ್ಬರಿಗೆ ಹಲ್ಲೆ ನಡೆಸಿ, ನಂತರ ಹಣ ದೋಚುತ್ತಿದ್ದಾಗ ಗ್ರಾಮಸ್ಥರು ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಾಕಿ ಥಳಿಸಿರುವ ಘಟನೆ ನಡೆದಿದೆ.
BIG NEWS: ಸಿದ್ದರಾಮಯ್ಯ ಮೇಲೆ 50ಕ್ಕೂ ಹೆಚ್ಚು ಕೇಸುಗಳಿವೆ – MLC ಎನ್ ರವಿಕುಮಾರ್ ಗಂಭೀರ ಆರೋಪ
ಪಾಂಡವಪುರ ತಾಲ್ಲೂಕಿನ ಬಳಘಟ್ಟ ಗ್ರಾಮದ ಗೇಟ್ ಬಳಿ ಜೇವರ್ಗಿ ಹಾಗೂ ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಚಿನ್ನದ ವ್ಯಾಪಾರಿ ಮೇಲೆ ದರೋಡೆಕೋರರು ದಾಳಿ ನಡೆಸಿದಾಗ, ಚಿನ್ನದ ವ್ಯಾಪಾರಿ ಕಾರುಗಳ ಗ್ಲಾಸ್ ಗಳನ್ನು ಪುಡಿ ಮಾಡಿ, ಹಲ್ಲೆ ನಡೆಸಿದ್ದಾರೆ. ದರೋಡೆಕೋರರು ಕೇರಳದ ಮೂಲದವರು, ತುಳು ಭಾಷೆ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಚಿನ್ನದ ವ್ಯಾಪಾರಿಗಳಾದ ಬೆಳಗಾಂ ಮೂಲದ ಬಾಲಾಜಿ, ಸಿರಾಜ್ ಅವರು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದಾರೆ. ದರೋಡೆಕೋರರು ಹಲ್ಲೆ ಮಾಡುತ್ತಿದ್ದನ್ನು ಗಮನಿಸಿದ ಗ್ರಾಮಸ್ಥರು ಪ್ರತಿದಾಳಿ ನಡೆಸಿ, ಇಬ್ಬರನ್ನು ಹಿಡಿದು, ಕಂಬಕ್ಕೆ ಕಟ್ಟಿದ್ದಾರೆ.
ಅಂಗನವಾಡಿ ನೌಕರರ ಯಡವಟ್ಟು: ಶೌಚಾಲಯದಲ್ಲೇ ಬಂಧಿಯಾಗಿದ್ದ ಮಗು…ಮುಂದೆನಾಯ್ತು?
ಇಂದು ಮುಂಜಾನೆ 6.30ರ ಸಮಯದಲ್ಲಿ 12 ಮಂದಿ ಇರುವ ತಂಡ ಎರಡು ಕಾರಿನಿಂದ ಮೈಸೂರಿಗೆ ಚಿನ್ನಾಭರಣ ಹಾಗೂ ಹಣದೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಇಬ್ಬರಿಗೆ ದರೋಡೆಕೋರರು ಹಲ್ಲೆ ನಡೆಸಿದ್ದಾಗ, ಗ್ರಾಮಸ್ಥರು ತೆರಳಿ, ದರೋಡೆಕೋರರಲ್ಲಿ ಇಬ್ಬರಿಗೆ ಹಿಡಿದು ಮರಕ್ಕೆ ಕಟ್ಟಿ, ಥಳಿಸಿದ್ದಾರೆ. ಇನ್ನುಳಿದ ದರೋಡೆಕೋರರು ಎರಡು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಪಾಂಡವಪುರ ತಾಲ್ಲೂಕಿನ ಬನಘಟ್ಟ ಗ್ರಾಮಸ್ಥರು ಇಲ್ಲದಿದ್ದರೆ ದರೋಡೆಕೋರರು ಚಿನ್ನದ ವ್ಯಾಪಾರಿಯಿಂದ ಚಿನ್ನ ದೋಚುತ್ತಿದ್ದರು ಎಂದು ತಿಳಿದುಬಂದಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
ಕಾಲೇಜಿಗೆ ಚಕ್ಕರ್, ಅಂತರಗಂಗೆ ತಪ್ಪಲಿಗೆ ಹಾಜರ್ : ಪೊದೆ ಸೇರುತ್ತಿರುವ ಕೋಲಾರದ ವಿದ್ಯಾರ್ಥಿಗಳು