ಮಂಡ್ಯ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಬರೋಬ್ಬರಿ 410 ಕೋಟಿ ರೂ.ಗೂ ಅಧಿಕ ಆಸ್ತಿ ಘೋಷಿಸಿದ್ದಾರೆ.ಸ್ಟಾರ್ ಚಂದ್ರು ಇಷ್ಟೊಂದು ಶ್ರೀಮಂತರಾದರೂ ಅವರ ಬಳಿಯಲ್ಲಿ ಯಾವುದೇ ಕಾರುಗಳಿಲ್ಲ. ಮೂರು ಟ್ರ್ಯಾಕ್ಟರ್‌ಗಳನ್ನು ಮಾತ್ರ ಅವರು ಹೊಂದಿದ್ದಾರೆ. ಇದರಲ್ಲಿ ಪತ್ನಿ ಆಸ್ತಿ ಹಾಗೂ ಅವಿಭಜಿತ ಹಿಂದೂ ಕುಟುಂಬದ ಆಸ್ತಿಯೂ ಸೇರಿದೆ ಎಂದು ಉಲ್ಲೆಖಿಸಿದ್ದಾರೆ.
ವೆಂಕಟರಮಣೇಗೌಡ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಅವರ ಕೈಯಲ್ಲಿ 1.8 ಲಕ್ಷ ರೂ., ಪತ್ನಿ ಕೈಯಲ್ಲಿ 1.9 ಲಕ್ಷ ರೂ. ಹಣವಿದೆ. ಅವರ ಬಳಿ 29.94 ಕೋಟಿ ರೂ. ಚರಾಸ್ತಿ ಇದ್ದರೆ, ಪತ್ನಿ ಬಳಿ ಬರೋಬ್ಬರಿ 182.33 ಕೋಟಿ ರೂ. ಮೊತ್ತದ ಚರಾಸ್ತಿ ಇದೆ. ಕುಟುಂಬದ ಹೆಸರಲ್ಲಿ 50.45 ಲಕ್ಷ ರೂ. ಮೌಲ್ಯದ ಆಸ್ತಿಯೂ ಇದೆ.
ಸ್ಟಾರ್ ಚಂದ್ರ ಬೆಂಗಳೂರು ಮಹಾಲಕ್ಷ್ಮೀಪುರಂ ನಿವಾಸಿಯಾಗಿದ್ದು, 2022-23ರಲ್ಲಿ ಬರೋಬ್ಬರಿ 16.28 ಕೋಟಿ ರೂ. ವಾರ್ಷಿಕ ಆದಾಯ ಗಳಿಸಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಪತ್ನಿ ಕುಸುಮ ಕೃಷ್ಣೇಗೌಡ ಆದಾಯ 38.45 ಕೋಟಿ ರೂ. ಇದ್ದುದಾಗಿ ಹೇಳಿದ್ದಾರೆ. ಇನ್ನು ಅವಿಭಜಿತ ಕುಟುಂಬದ ಆದಾಯ 36.11 ಕೋಟಿ ರೂ. ಎಂದು ತಿಳಿಸಿದ್ದಾರೆ.
ವೆಂಕಟರಮಣೇಗೌಡ ಅವರ ಬಳಿ ಬರೋಬ್ಬರಿ 237.11 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಬಳಿ 146.99 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಇನ್ನು ಕುಟುಂಬದ ಹೆಸರಲ್ಲೂ 26.08 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಇದರಲ್ಲಿ ಪತ್ನಿ ಕುಸುಮಾ ಅವರು ಸ್ಟಾರ್ ಇನ್ಫ್ರಾಟೆಕ್ ಮೇಲೆ ಮಾಡಿರುವ ಬರೋಬ್ಬರಿ 176.44 ಕೋಟಿ ರೂ. ಹಣವೂ ಸೇರಿದೆ. ಪತ್ನಿ ಬಳಿಯಲ್ಲಿ 4.2 ಕೆಜಿ ಚಿನ್ನ, 25.6 ಕೆಜಿ ಬೆಳ್ಳಿಯೂ ಇದೆ.ಸ್ಟಾರ್ ಚಂದ್ರು ಇಷ್ಟೊಂದು ಶ್ರೀಮಂತರಾದರೂ ಅವರ ಬಳಿಯಲ್ಲಿ ಯಾವುದೇ ಕಾರುಗಳಿಲ್ಲ. ಮೂರು ಟ್ರ್ಯಾಕ್ಟರ್‌ಗಳನ್ನು ಮಾತ್ರ ಅವರು ಹೊಂದಿದ್ದಾರೆ.