ಮಂಡ್ಯ :- ಕುರಿಮರಿಯೊಂದನ್ನು ಹೆಬ್ಬಾವು ದಾಳಿ ನಡೆಸಿ ಕುರಿಯನ್ನು ನುಂಗುತ್ತಿದ್ದ ವೇಳೆ ಕುರಿ ಮರಿ ಮೃತಪಟ್ಟಿದ್ದು, ಹೆಬ್ಬಾವನ್ನು ರಕ್ಷಿಸಿರುವ ಘಟನೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದೆ.
ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮ ವ್ಯಾಪ್ತಿಯ ಶ್ರೀ ಪಟ್ಟಲದಮ್ಮ ದೇವಾಲಯದ ಸಮೀಪ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡ ಬೃಹತ್ ಗಾತ್ರದ ಸುಮಾರು 11 ಅಡಿಯಷ್ಟು ಉದ್ದದ ಹೆಬ್ಬಾವು, ಕುರಿ ಮಂದೆ ಮೇಲೆ ದಾಳಿ ನಡೆಸಿ 5 ತಿಂಗಳ ಕುರಿಯನ್ನು ನುಂಗುತ್ತಿದ್ದ ವೇಳೆ ಇದನ್ನು ಗಮನಿಸಿದ ಕುರಿಗಾಯಿ ರಾಮಕೃಷ್ಣೇಗೌಡ ಉರಗ ತಜ್ಞ ರವಿ ಅವರಿಗೆ ವಿಷಯ ತಿಳಿಸಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರವಿ ಹೆಬ್ಬಾವಿನಿಂದ ಕುರಿ ಮರಿಯನ್ನು ರಕ್ಷಿಸಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲು ತೆಗೆದುಕೊಂಡು ಹೋಗಿದ್ದಾರೆ ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕುರಿಮರಿ ಮೃತಪಟ್ಟಿದೆ.
ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ತಕ್ಷಣವೇ ಗ್ರಾಮಕ್ಕೆ ಧಾವಿಸಿದ ಉಪ ವಲಯ ಅರಣ್ಯಾಧಿಕಾರಿಗಳಾದ ಸವಿತಾ, ಕಾಂತರಾಜ್ ಉರಗ ತಜ್ಞ ರವಿ ಅವರ ಸಹಾಯದೊಂದಿಗೆ ಕಾರ್ಯಾಚರಣೆಗೆ ನಡೆಸಿ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಹಾವನ್ನು ಕೊಂಬಿನ ಕಲ್ಲು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ವರದಿ : ಗಿರೀಶ್ ರಾಜ್, ಮಂಡ್ಯ
ರಾಜ್ಯದಲ್ಲಿ ‘ರೇಷನ್ ಕಾರ್ಡ್’ ರದ್ದತಿಗೆ ಕಾರಣವೇನು? ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ | Ration Card Cancel