ಮೈಸೂರು : ಮಾಂಡೌಸ್ ಚಂಡಮಾರುತದ ಹಿನ್ನೆಲೆ ರಾಜ್ಯದ ಹಲವು ಕಡೆ ಮಳೆ ಸುರಿಯುತ್ತಿದ್ದು, ಇದರಿಂದ ರೈತರಿಗೆ ಕೃಷಿ ಕಾರ್ಯಕ್ಕೆ ಬಹಳ ತೊಂದರೆಯಾಗಿದೆ.
ಮುಂದಿನ ಐದು ದಿನ ರಾಜ್ಯದಲ್ಲಿ ಮಳೆಯಾಗುವ ಸಂಭವವಿದ್ದು, ಈ ಹಿನ್ನೆಲೆ ರೈತರು ಭತ್ತ ಕಟಾವು ಮಾಡದಂತೆ ರೈತರಿಗೆ ಕೃಷಿ ಇಲಾಖೆ ಮನವಿ ಮಾಡಿದೆ.
ಈ ಬಗ್ಗೆ ಮೈಸೂರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಚಂದ್ರಶೇಖರ್ ಸೂಚನೆ ನೀಡಿದ್ದು, ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ರೈತರು ಭತ್ತ ಕಟಾವು ಮಾಡಬೇಡಿ. ಈಗಾಗಲೇ ಹಲವು ಕಡೆ ರೈತರು ಭತ್ತ ಕಟಾವು ಮಾಡಿದ್ದು, ಇದರಿಂದ ಭತ್ತದ ಬೆಳೆ ನೀರಿನಿಂದ ಹಾಳಾಗಿ ಹೋಗಿದೆ. ಆದ್ದರಿಂದ ಐದು ದಿನ ಯಾವ ರೈತರು ಕೂಡ ಭತ್ತದ ಕಟಾವು ಮಾಡಬೇಡಿ ಎಂದು ಸೂಚನೆ ನೀಡಿದ್ದಾರೆ.
ಈಗಾಗಲೇ ರಾಜ್ಯದ ಹಲವು ಕಡೆ ಮಳೆ ಸುರಿಯುತ್ತಿದ್ದು, ರೈತರ ಬೆಳೆ ಮಳೆಯಿಂದ ಹಾಳಾಗಿದೆ. ಹಲವು ಕಡೆ ಈಗಾಗಲೇ ರೈತರು ಭತ್ತದ ಕಟಾವು ಮಾಡಿದ್ದು, ಅದನ್ನು ಮನೆಗೆ ತರಲು ಮಳೆ ಬಿಡುತ್ತಿಲ್ಲ. ಈ ಪರಿಣಾಮವಾಗಿ ಗದ್ದೆಯಲ್ಲೇ ಭತ್ತದ ಪೈರು ಹಾಳಾಗುತ್ತಿದೆ. ವರ್ಷಗಟ್ಟಲೇ ಕಷ್ಟಪಟ್ಟು ಕೆಲಸ ಮಾಡಿದ ರೈತ ಇನ್ನೇನು ಭತ್ತದ ಬೆಳೆ ಮನೆಗೆ ತರಬೇಕು ಎನ್ನುವಷ್ಟರಲ್ಲಿ ಮಳೆ ರೈತನ ಹೊಟ್ಟೆಗೆ ಕಲ್ಲು ಹಾಕಿದೆ.
ಡಿ.16 ರವರೆಗೆ ಮಳೆ ಮುನ್ಸೂಚನೆ
ಮ್ಯಾಂಡಸ್ ಚಂಡಮಾರುತದ ಹಿನ್ನೆಲೆ ರಾಜ್ಯದಲ್ಲಿ ಡಿ.16 ರವರೆಗೆ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ( IMD) ಮುನ್ಸೂಚನೆ ನೀಡಿದೆ.
ಡಿ.16 ರವರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದ್ದು, ಚಾಮರಾಜನಗರ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಇನ್ನೂ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಹಾವೇರಿ, ಗದಗ ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ.
Viral News: ವೈಷ್ಣೋದೇವಿ ದೇವಸ್ಥಾನ ಭೇಟಿ ನೀಡಿದ ಬಾಲಿವುಡ್ ಸ್ಟಾರ್ ನಟ ಶಾರುಕ್ ಖಾನ್.. ವಿಡಿಯೋ ವೈರಲ್..| Watch