ನವದೆಹಲಿ : ಸಮಸ್ಯೆಮುಕ್ತ ವಿಮಾನ ಪ್ರಯಾಣಕ್ಕಾಗಿ ಡಿಜಿ ಯಾತ್ರಾ ವ್ಯವಸ್ಥೆಯನ್ನು ದೇಶದ ವಿಮಾನ ನಿಲ್ದಾಣಗಳಲ್ಲಿ ಪರಿಚಯಿಸಲಾಗಿದೆ. ಪ್ರಯಾಣಿಕರ ಸಂಪರ್ಕರಹಿತ ಮತ್ತು ತಡೆರಹಿತ ಸಂಸ್ಕರಣೆಗಾಗಿ ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ (ಎಫ್ಆರ್ಟಿ) ಆಧಾರದ ಮೇಲೆ ಇದನ್ನು ವಿನ್ಯಾಸಗೊಳಸಿಲಾಗಿದೆ.
BIGG NEWS : ‘KSRTC ಬಸ್’ಗಳ ಒಪ್ಪಂದ ದರ ಹೆಚ್ಚಳ : ಇಲ್ಲಿದೆ ನೂತನ ಪರಿಷ್ಕೃತ ದರ| KSRTC Bus
ಮುಖದ ವೈಶಿಷ್ಟ್ಯಗಳನ್ನೇ ಬಳಸಿಕೊಂಡು ವಿಮಾನ ನಿಲ್ದಾಣಗಳಲ್ಲಿರುವ ವಿವಿಧ ಚೆಕ್ಪೋಸ್ಟ್ಗಳಲ್ಲಿ ಪ್ರಯಾಣಿಕರು ಸಲೀಸಾಗಿ ತೆರಳಬಹುದು. ಇದನ್ನು ಬೋರ್ಡಿಂಗ್ ಪಾಸ್ನೊಂದಿಗೆ ಲಿಂಕ್ ಮಾಡುವ ಮೂಲಕ ಮುಖವನ್ನು ಸ್ಕ್ಯಾನ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
BIGG NEWS : ‘KSRTC ಬಸ್’ಗಳ ಒಪ್ಪಂದ ದರ ಹೆಚ್ಚಳ : ಇಲ್ಲಿದೆ ನೂತನ ಪರಿಷ್ಕೃತ ದರ| KSRTC Bus
ದೆಹಲಿ, ಬೆಂಗಳೂರು ಮತ್ತು ವಾರಣಾಸಿ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಆರಂಭವಾಗಿದ್ದು, ಮೊದಲ ಹಂತದಲ್ಲಿ ದೇಶದ ಏಳು ವಿಮಾನ ನಿಲ್ದಾಣಗಳಲ್ಲಿ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಹೀಗಾಗಿ ಹೈದರಾಬಾದ್, ಕೋಲ್ಕತ್ತಾ, ಪುಣೆ, ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಶೀಘ್ರ ಆರಂಭವಾಗಲಿದೆ. ಬಳಿಕ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿಯೂ ಜಾರಿಯಾಗಲಿದೆ.
BIGG NEWS : ‘KSRTC ಬಸ್’ಗಳ ಒಪ್ಪಂದ ದರ ಹೆಚ್ಚಳ : ಇಲ್ಲಿದೆ ನೂತನ ಪರಿಷ್ಕೃತ ದರ| KSRTC Bus
ಆಧಾರ್ ದೃಢೀಕರಣ ಮತ್ತು ಸೆಲ್ಪೀ ಫೋಟೋಗಳನ್ನು ಡಿಜಿ ಯಾತ್ರಾ ಅಪ್ಲಿಕೇಶನ್ನಲ್ಲಿ ನೋಂದಣಿ ಮಾಡಿದರೆ ಸೌಲಭ್ಯ ಬಳಸಲು ಸಾಧ್ಯವಾಗುತ್ತದೆ. ಪ್ರಯಾಣಿಕರ ಗುರುತಿನ ಚೀಟಿ, ಪ್ರಯಾಣದ ಪುರಾವೆಗಳನ್ನು ಅವರ ಸ್ಮಾರ್ಟ್ಫೋನ್ನಲ್ಲಿ ಮಾತ್ರ ಸಂಗ್ರಹಿಸಿ ಮಾಹಿತಿ ಸುರಕ್ಷಿತವಾಗಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.