ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸೇವಾ ವಹಿಯನ್ನು HRMS 2.0 ತಂತ್ರಾಂಶದಲ್ಲಿ ವಿದ್ಯುನ್ಮಾನ ಸೇವಾವಹಿಯಲ್ಲೇ ನಿರ್ವಹಣೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದಂತ ವಿಜಯ ಈ ರವಿಕುಮಾರ್ ಅವರು ಜ್ಞಾಪನ ಆದೇಶ ಹೊರಡಿಸಿದ್ದು, ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಸಂಬಂಧ ಹಚ್.ಆರ್.ಎಮ್.ಎಸ್:2.0 ತಂತ್ರಾಂಶದ ಅಂಗವಾದ ವಿದ್ಯುನ್ಮಾನ ಸೇವಾ ವಹಿಯನ್ನು (Electronic Service Register- ESR) ಯನ್ನು ಸಿದ್ಧಪಡಿಸಲಾಗಿದೆ. 2021-22 ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಈಗಾಗಲೇ ನೇಮಕಗೊಂಡಿರುವ ಮತ್ತು ಇನ್ನೂ ಮುಂದೆ ನೇಮಕಗೊಳ್ಳುವ ಎಲ್ಲಾ ಅಧಿಕಾರಿಗಳು / ನೌಕರರುಗಳ ಸೇವಾ ವಹಿಯನ್ನು ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶದ ‘ವಿದ್ಯುನ್ಮಾನ ಸೇವಾವಹಿ” ಯಲ್ಲಿಯೇ ನಿರ್ವಹಿಸುವಂತೆ ಉಲ್ಲೇಖದ 1,2,3,4,5 ಮತ್ತು 6 ರ ಸರ್ಕಾರದ ಆದೇಶಗಳಲ್ಲಿ ತಿಳಿಸಲಾಗಿರುತ್ತದೆ ಎಂದಿದ್ದಾರೆ.
ಈ ಸಂಬಂಧ ಈಗಾಗಲೇ ದಿನಾಂಕ : 04-09-2024 ಮತ್ತು 21-11-2024 ರಂದು ಎರಡು ಬಾರಿ ತರಬೇತಿಯನ್ನು ನೀಡಲಾಗಿರುತ್ತದೆ. ಅಲ್ಲದೇ ಈ ಕಚೇರಿಯ ಸಮ ಸಂಖ್ಯೆ ಜ್ಞಾಪನ ದಿನಾಂಕ : 10-12-2024 ರಲ್ಲಿ ವಿದ್ಯುನ್ಮಾನ ಸೇವಾವಹಿ ಅನುಷ್ಠಾನಗೊಳಿಸುವ ಕಾರ್ಯಕ್ಕಾಗಿ ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸದರಿ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಮತ್ತು ಜವಾಬ್ದಾರಿಗಳ ಬಗ್ಗೆ ಸೂಚಿಸಲಾಗಿರುತ್ತದೆ. ಆದರೂ ಸಹ ವಿದ್ಯುನ್ಮಾನ ಸೇವಾವಹಿ ಅನುಷ್ಠಾನಗೊಳಿಸುವ ಕಾರ್ಯವೂ ತೃಪ್ತಿಕರವಾಗಿರುವುದಿಲ್ಲ.
ಉಲ್ಲೇಖ-7 ರ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಪತ್ರದಲ್ಲಿ ಈಗಾಗಲೇ ಎಲ್ಲಾ ಇಲಾಖಾ ಮುಖ್ಯಸ್ಮರಿಗೆ ಇಎಸ್‌ಆರ್ ಅನುಷ್ಠಾನ ಮಾಡಲು ಸುತ್ತೋಲೆಗಳನ್ನು ಹೂರಡಿಸಿ ಹಾಗೂ ಎಲ್ಲಾ ಕಛೇರಿ ಮುಖ್ಯಸ್ಥರು / ಡಿಡಿಓ ಗಳಿಗೆ ಇಎಸ್‌ಆರ್ ತರಬೇತಿಯನ್ನು ನೀಡಲಾಗಿರುತ್ತದೆ. ಆದರೂ ಸಹ ಇಎಸ್‌ಆರ್ ಅನುಷ್ಠಾನದ ಪಗತಿ ತೃಪ್ತಿಕರವಾಗಿರುವುದಿಲ್ಲ. ಹೆಚ್.ಆರ್.ಎಂ.ಎಸ್-2 ತಂತ್ರಾಂಶವನ್ನು ಸರ್ಕಾರಿ ನೌಕರರಿಗೆ ನೀಡುವಂತಹ ಎಲ್ಲಾ ಸೇವೆಗಳು Online ಮುಖಾಂತರವೇ ನೀಡಲಾಗುವುದರಿಂದ ನೌಕರರ ಇಲ್ಲಿಯವರೆಗಿನ ಸೇವಾ ವಿವರಗಳ ಮಾಹಿತಿಯನ್ನು ವಿದ್ಯುನ್ಮಾನ ರೂಪದಲ್ಲಿ ವರ್ಗಾಯಿಸುವುದು ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ವಿದ್ಯುನ್ಮಾನ ಸೇವಾ ವಹಿಯ ಅನುಷ್ಠಾನವನ್ನು ಶೀಘ್ರವಾಗಿ ಮುಕ್ತಾಯಗೊಳಿಸಲು ತಾವು ತಮ್ಮ ಎಲ್ಲಾ ಹಣ ಸೆಳೆಯುವ ಅಧಿಕಾರಿಗಳಿಗೆ ನಿರ್ದೇಶಿಸಲು ಕೋರಿದೆ.
ಉಲ್ಲೇಖ-7 ರ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಪತ್ರವನ್ನು ಈ ಜಾಪನದೊಂದಿಗೆ ಅನುಬಂಧಿಸಿದ. ಸದರಿ ಇಎಸ್‌ಆರ್ ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಅನಗತ್ಯ ವಿಳಂಬ ನೀತಿಯನ್ನು ಅನುಸರಿಸದೇ, ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ಅಧಿಕಾರಿಗಳ ಸಹಕಾರದೊಂದಿಗೆ ಅತ್ಯಂತ ತುರ್ತಾಗಿ ಕ್ರಮವಹಿಸಲು ಇಲಾಖೆಯ ಎಲ್ಲಾ ಕಚೇರಿಗಳ ಮುಖ್ಯಸ್ಥರುಗಳಿಗೆ ತಿಳಿಸಿದ. ವಿಳಂಬ ದೂರಣೆಯನ್ನು ಅನುಸರಿಸಿದಲ್ಲಿ ಸಂಬಂಧಿಸಿದ ಕಛೇರಿಯ ಮುಖ್ಯಸ್ಥರು/ ಡಿಡಿಓಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಈ ಮೂಲಕ ತಿಳಿಯಪಡಿಸಿದೆ ಎಂದಿದ್ದಾರೆ.
BREAKING: ರಾಜ್ಯದ ಬಹುಮಹಡಿ ಕಟ್ಟಡದ ಮಾಲೀಕರಿಗೆ ಬಿಗ್ ಶಾಕ್: ಶೇ.1% ಸೆಸ್ ವಿಧಿಸಲು ಸರ್ಕಾರ ನಿರ್ಧಾರ
`ಪ್ಯಾರಸಿಟಮಾಲ್’ ಬಳಸಿ ಬಟ್ಟೆಗಳ ಕಲೆಗಳನ್ನು ತೆಗೆಯಬಹುದು : ವಿಡಿಯೋ ವೈರಲ್ | WATCH VIDEO