ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುವ ಭೀತಿ ಎದುರಾಗಿದೆ. ಚೀನಾದಲ್ಲಿ ಕೊರೊನಾ ಹೆಚ್ಚಾಗಿದ್ದರಿಂದ ವಿದೇಶದಿಂದ ಬರುವವರ ಮೇಲೆ ಕಣ್ಣು ಇಡಲಾಗಿದೆ.
BIGG NEWS: ಬೆಳಗಾವಿಯಲ್ಲಿ ವಿದ್ಯಾರ್ಥಿನಿಯರ ಜೊತೆ ಶಿಕ್ಷಕನ ಅಸಭ್ಯ ವರ್ತನೆ; ಕಾಮುಕ ಶಿಕ್ಷಕನ ವಿರುದ್ಧ ಕೇಸ್
ಇದೀಗ ಬೆಂಗಳೂರು ಜನರಿಗೆ ಶಾಕ್ ನೀಡಿದೆ. ಯಾಕೆಂದರೆ ಚೀನಾದಿಂದ ಬೆಂಗಳೂರಿಗೆ ಬಂದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ.35 ವರ್ಷದ ವ್ಯಕ್ತಿ ನಿನ್ನೆ ಚೀನಾದಿಂದ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಕೊರೊನಾ ಟೆಸ್ಟ ಮಾಡಿದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು BF7 ನಾ ಎಂದು ತಿಳಿದುಕೊಳ್ಳಲು ಸೋಂಕಿತ ವ್ಯಕ್ತಿಯ ಸ್ಯಾಂಪಲ್ಸ್ ಅನ್ನ ಜಿನೋಮಿಕ್ ಸೀಕ್ವೆನ್ಸಿಂಗ್ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ ವಿದೇಶಗಳಿಂದ ಬಂದ 9 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.