ಕೆಎನ್ಎನ್ಡಿಜಿಟಲ್ ಡೆಸ್ಜ್ : ಆಹಾರ ವಿತರಣಾ ಕಂಪನಿ ಝೊಮಾಟೊ(Zomato) ಇತ್ತೀಚೆಗೆ ‘ಇಂಟರ್ಸಿಟಿ ಲೆಜೆಂಡ್ಸ್’ ಎಂಬ ಸೇವೆಯನ್ನು ಪ್ರಾರಂಭಿಸಿದೆ. ಇದು ಇತರ ನಗರಗಳಲ್ಲಿನ ಪ್ರಸಿದ್ಧ ಔಟ್ಲೆಟ್ಗಳು ಮತ್ತು ರೆಸ್ಟೋರೆಂಟ್ಗಳಿಂದ ಅನನ್ಯ ಭಕ್ಷ್ಯಗಳನ್ನು ಆರ್ಡರ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಈ ವೈಶಿಷ್ಟ್ಯವನ್ನು ಆರಂಭದಲ್ಲಿ ದಕ್ಷಿಣ ದೆಹಲಿ ಮತ್ತು ಗುರುಗ್ರಾಮ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಇತ್ತೀಚೆಗೆ, ಜೊಮಾಟೊದಲ್ಲಿ ಗುರುಗ್ರಾಮ್ ನಿವಾಸಿಯೊಬ್ಬರು, ಆಪ್ನ ಹೊಸ ಇಂಟರ್ಸಿಟಿ ವೈಶಿಷ್ಟ್ಯದ ಮೂಲಕ ಹೈದರಾಬಾದ್ನಿಂದ ಚಿಕನ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ. ಆರ್ಡರ್ ಮನೆ ತಲುಪಿದೆ. ಆದ್ರೆ, ಅದರಲ್ಲಿ ಬಿರಿಯಾನಿ ಬಿಟ್ಟು ಸಲಾನ್ ಇತ್ತು. ಗ್ರಾಹಕ ಪ್ರತೀಕ್ ಕನ್ವಾಲ್ ಅವರು ʻಸಲಾನ್ʼ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ತಮ್ಮ ಅಳಲು ತೋಡಿಕೊಂಡಿದ್ದಾರೆ. ʻನಾನು ಝೊಮಾಟೊನಲ್ಲಿ ಹೈದರಾಬಾದ್ನ ರೆಸ್ಟೋರೆಂಟ್ನಿಂದ ಚಿಕನ್ ಬಿರಿಯಾನಿ ಬೇಕೆಂದು ಆರ್ಡರ್ ಮಾಡಿದ್ದೆ. ಆದರೆ, ಸಲಾನ್ ಮಾತ್ರ ಸ್ವೀಕರಿಸಿದ್ದೇನೆʼ ಎಂದು ಹೇಳಿಕೊಂಡಿದ್ದಾರೆ. ಇದೀಗ ಅವರ ಪೋಸ್ಟ್ ವೈರಲ್ ಆಗುತ್ತಿದೆ.
Ordered chicken biryani from Hotel Shadab using @zomato interstate legend service and all I got was a small box of salan. @deepigoyal this seemed like a great idea but my dinner plans are up in the air now. Now, you owe me a Biryani in Gurgaon! pic.twitter.com/ppVbausds8
— Prateek Kanwal (@prateekkanwal) September 3, 2022
ಈ ಬಗ್ಗೆ ಪ್ರತೀಕ್ ಕನ್ವಾಲ್ ಝೊಮಾಟೊಗೆ ದೂರು ನೀಡಿದ್ದರು. ಅವರ ದೂರಿಗೆ ಪ್ರತಿಕ್ರಿಯಿಸಿದ ಝೊಮಾಟೊ, ಕನ್ವಾಲ್ ಅವರಿಗೆ ಹೆಚ್ಚುವರಿಯಾಗಿ ಬಿರಿಯಾನಿಯನ್ನು ಮನೆಗೆ ಕಳುಹಿಸಿದೆ. ನಂತ್ರ, ಮನೆಗೆ ತಲುಪಿದ ಬಿರಿಯಾನಿ ಫೋಟೋ ತೆಗೆದು ಕನ್ವಾಲ್ ಪೋಸ್ಟ್ ಮಾಡಿದ್ದಾರೆ. ಕಳೆದುಹೋದ ಬಿರಿಯಾನಿ ಪಡೆದ ನಂತರ ಕನ್ವಾಲ್ ತಮ್ಮ ಗ್ರಾಹಕ ಸೇವೆಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದರು.
Credit where it’s due! Sushant from customer service and product head of @zomato interstate legends not only tracked my Biryani but also sent me an extra Biryani from @biryanibykilo! Issue has been resolved @deepigoyal! Atleast, as a shareholder I feel good about customer service pic.twitter.com/nZ1O7TvsAJ
— Prateek Kanwal (@prateekkanwal) September 3, 2022