ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ನಾವು ಮೊಸಳೆ ಎಂಬ ಹೆಸರು ಹೇಳಿದ ಕೂಡಲೇ ಬೆಚ್ಚಿ ಬೀಳುತ್ತೇವೆ, ಕ್ಷಣದಲ್ಲಿ ಮನುಷ್ಯನನ್ನು ತಿಂದು ತೇಗುವ ತಾಕತ್ತು ಇರುವುದು ಈ ಮೊಸಳೆಗೆ , ಆದರೆ ಇಲ್ಲೊಬ್ಬ ಭೂಪ ಮೊಸಳೆ ಜೊತೆಯೇ ಮಲಗಿ ಅದಕ್ಕೆ ಕೀಟಲೆ ಕೊಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಹುಬ್ಬೇರಿಸಿದೆ.
ವ್ಯಕ್ತಿಯೊಬ್ಬ ಮೊಸಳೆಯ ವೇಷಭೂಷಣ ಧರಿಸಿ ನಿಜವಾದ ಮೊಸಳೆಯನ್ನು ಚುಡಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇದರ ವಿಡಿಯೋ ಕ್ಲಿಪ್ ನ್ನು ನರೇಂದ್ರ ಸಿಂಗ್ ಎಂಬುವವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವ್ಯಕ್ತಿಯೊಬ್ಬ ಮೊಸಳೆಯೊಂದರ ಹತ್ತಿರ ಹೋಗಿ ಅದರ ಕಾಲು ಎಳೆದು ಪದೇ ಪದೇ ಕೀಟಲೆ ಕೊಡುವ ವಿಡಿಯೋ ನೋಡಿದರೆ ಮೈ ಜುಮ್ಮೆನಿಸುವಂತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾ ಜನರನ್ನು ಬೆಚ್ಚಿ ಬೀಳಿಸಿದೆ. ಸಮುದ್ರವಾಸಿ ಅಥವಾ ನದೀಮುಖದಲ್ಲಿರುವ ಮೊಸಳೆಯು ಎಲ್ಲಾ ಜೀವಂತ ಸರೀಸೃಪಗಳ ಪೈಕಿ ಅತಿದೊಡ್ಡದು ಎನಿಸಿಕೊಂಡಿದೆ. ತಾನು ವಾಸಿಸುವಪ್ರದೇಶಗಳ ಸುತ್ತ ಮುತ್ತ ವಾಸಿಸುವ ಮನುಷ್ಯರ ಪಾಲಿಗೆ ಸಮುದ್ರವಾಸಿ ಮೊಸಳೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಮನುಷ್ಯರನ್ನು ಕೊಂದು ತಿಂದ ಹಲವು ಘಟನೆಗಳು ನಡೆದಿದೆ.
कौन सा नशा किए थे…#crocodile #Viral #TrendingNow pic.twitter.com/VHTMF56ope
— Narendra Singh (@NarendraNeer007) December 8, 2022