ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಐಕೆಇಎ ಮಾಲ್ನಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಕುಸಿದುಬಿದ್ದಿದ್ದರು ಮತ್ತು ಅವರಿಗೆ ಯಾವುದೇ ನಾಡಿ ಮಿಡಿತವಿರಲಿಲ್ಲ, ಅದೃಷ್ಟವಶಾತ್ ವೈದ್ಯರೊಬ್ಬರು ಒಂದು ಕ್ಷಣವೂ ವ್ಯರ್ಥ ಮಾಡದೆ ವ್ಯಕ್ತಿಯ ಜೀವವನ್ನು ಉಳಿಸಿದ ಘಟನೆಯ ವೀಡಿಯೊ ವೈರಲ್ ಆಗಿದೆ.
My dad saved a life. We happen to be at IKEA Bangalore where someone had an attack and had no pulse. Dad worked on him for more than 10 mins and revived him. Lucky guy that a trained orthopedic surgeon was shopping in the next lane. Doctors are a blessing. Respect !!! pic.twitter.com/QXpXTMBOya
— Rohit Dak (@rohitdak) December 29, 2022
ಈ ವಿಡಿಯೋ ಕಂಡ ನೆಟ್ಟಿಗರು ವೈದ್ಯರನ್ನು ಶ್ಲಾಘಿಸಿದ್ದಾರೆ
ಶಾಪಿಂಗ್ ಮಾಡುವಾಗ ವ್ಯಕ್ತಿಯು ಹೃದಯ ಸ್ತಂಭನಕ್ಕೆ ಒಳಗಾದತು ಮತ್ತು ನೆಲದ ಮೇಲೆ ಬೀಳುವ ಮೂಲಕ ಪ್ರಜ್ಞೆ ತಪ್ಪಿತ್ತು ಅದೃಷ್ಟವಶಾತ್, ಅಲ್ಲೇ ಶಾಪಿಂಗ್ ಮಾಡುತ್ತಿದ್ದ ವೈದ್ಯರೊಬ್ಬರು ಆ ವ್ಯಕ್ತಿಯ ರಕ್ಷಣೆಗೆ ಓಡೋಡಿ ಬಂದು ಸಕಾಲದಲ್ಲಿ ಕಾರ್ಡಿಯೋಪಲ್ಮೊನರಿ ರೆಸಸಿಟೇಶನ್ ಅಥವಾ ಸಿಪಿಆರ್ನೊಂದಿಗೆ ಅವನನ್ನು ರಕ್ಷಣೆ ಮಾಡಿದರು.
ಇಡೀ ಘಟನೆಯ ವೀಡಿಯೊವನ್ನು ವೈದ್ಯರ ಮಗ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅಂದಿನಿಂದ ವೀಡಿಯೊ ವೈರಲ್ ಆಗುತ್ತಿದ್ದಂತೆ ವೈದ್ಯರು ಆನ್ಲೈನ್ನಲ್ಲಿ ಪ್ರಶಂಸೆಗಳನ್ನು ಪಡೆಯುತ್ತಿದ್ದಾರೆ. ಅವರು ವೀಡಿಯೊವನ್ನು ಹಂಚಿಕೊಂಡಿದ್ದು, “ನನ್ನ ತಂದೆ ಒಂದು ಜೀವವನ್ನು ಉಳಿಸಿದ್ದಾರೆ. ನಾವು ಬೆಂಗಳೂರಿನ ಐಕೆಇಎ ಸ್ಟೋರ್ನಲ್ಲಿ ಇದ್ದಾಗ, ಅಲ್ಲಿ ಯಾರೋ ಒಬ್ಬರು ಹೃದಯಾಘಾತಕ್ಕೆ ಒಳಗಾಗಿ ನಾಡಿಮಿಡಿತವನ್ನು ಹೊಂದಿರಲಿಲ್ಲ. ಅಪ್ಪ 10 ನಿಮಿಷಗಳ ಕಾಲ ಸಿಪಿಆರ್ ಮೂಲಕ ಪ್ರಥಮ ಚಿಕಿ ತ್ಸೆ ನೀಡುವ ಮೂಲಕ ಆತನ ಜೀವ ಉಳಿಸಿದ್ರು ಎಂದು ಬರೆದುಕೊಂಡಿದ್ದನು . ಬಳಿಕ ಕೂಡಲೇ ಐಕೆಇಎ ಸಿಬ್ಬಂದಿ ಧಾವಿಸಿದರು
ಟ್ವಿಟ್ಟರ್ ನಲ್ಲಿ 32.9K ಲೈಕ್ ಗಳನ್ನು ಗಳಿಸಿದೆ. ನೆಟ್ಟಿಗರು ವೈದ್ಯರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ ಮತ್ತು “ಬಿಗ್ ಸೆಲ್ಯೂಟ್ ಟು ಹಿಮ್”, “ನಿಮ್ಮ ತಂದೆಗೆ ಹೃತ್ಪೂರ್ವಕ ಧನ್ಯವಾದಗಳು” ಎಂಬಂತಹ ಕಾಮೆಂಟ್ಗಳನ್ನು ಪೋಸ್ಟ್ ಮಾಡಿದ್ದಾರೆ.