ಬೆಂಗಳೂರು: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ನನ್ನು ಕದ್ದು ಕಳ್ಳ ಪರಾರಿಯಾಗಿರುವ ಘಟನೆ ಜಯನಗರ 24ನೇ ಮುಖ್ಯರಸ್ತೆಯಲ್ಲಿ ನಡೆದಿದೆ.
BIGG NEWS: ಕೊಪ್ಪಳದಲ್ಲಿ ಭಾರಿ ಮಳೆ: ಗಂಗಾವತಿ- ಕಂಪ್ಲಿ ಸೇತುವೆ ಮುಳುಗಡೆ; ಜನಜೀವನ ಅಸ್ತವ್ಯಸ್ತ
ಆ ಕಡೆ..ಈ ಕಡೆ ನೋಡಿ ಅಂಗಡಿ ಮುಂದೆ ನಿಲ್ಲಿಸಿದ ಬೈಕ್ ಕದ್ದಿದ್ದಾನೆ. ಗಾಡಿ ಕದ್ದ 40 ನಿಮಿಷದಲ್ಲಿ ಅಪಘಾತ ಸಂಭವಿಸಿದೆ.ಸ್ನೇಹಿತರೊಂದಿಗೆ ತ್ರಿಬಲ್ ರೈಡ್ ಹೋಗಿ ಆಕ್ಸಿಡೆಂಟ್ ಮಾಡಿದ್ದನು. ಆಕ್ಸಿಡೆಂಟ್ ನಿಂದ ಶುರುವಾದ ಜಗಳ ಬಿಡಿಸಲು ಹೋದ ಸಂಚಾರಿ ಪೊಲೀಸ್ ಪೇದೆ.
BIGG NEWS: ಕೊಪ್ಪಳದಲ್ಲಿ ಭಾರಿ ಮಳೆ: ಗಂಗಾವತಿ- ಕಂಪ್ಲಿ ಸೇತುವೆ ಮುಳುಗಡೆ; ಜನಜೀವನ ಅಸ್ತವ್ಯಸ್ತ
ವಾಹನ ತಪಾಸಣೆ ವೇಳೆ, ಆಕ್ಸಿಡೆಂಟ್ ಮಾಡಿದ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
ಗಾಡಿ ಕಳವಾಗಿರೋದು ಅನ್ನೊದು ಕನ್ಫರ್ಮ್ ಆಗ್ತಿದ್ದಂತೆ ಕಳ್ಳರು ಕಾಲ್ಕಿತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಜಯನಗರ ಪೊಲೀಸರಿಗೆ ಬೈಕ್ ಅನ್ನು ಹಸ್ತಾಂತರ ಮಾಡಿದ್ದಾರೆ.
ಈ ಸಂಬಂಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.