ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್ ಪ್ರದೇಶದಲ್ಲಿರುವ ಸಿಎಂ ಮಮತಾ ಬ್ಯಾನರ್ಜಿ(Mamata Banerjee) ಅವರ ನಿವಾಸಕ್ಕೆ ನುಸುಳಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವ್ಯಕ್ತಿಯೋರ್ವ ಭಾನುವಾರ ಮುಂಜಾನೆ 1 ಗಂಟೆ ಸುಮಾರಿಗೆ ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್ ಪ್ರದೇಶದಲ್ಲಿನ 34 ಬಿ ಹರೀಶ್ ಚಟರ್ಜಿ ಸ್ಟ್ರೀಟ್‌ನಲ್ಲಿರುವ ಬ್ಯಾನರ್ಜಿ ಅವರ ಮನೆಯನ್ನು ಪ್ರವೇಶಿಸಲು ಗೋಡೆಯನ್ನು ಹತ್ತಿದ್ದು, ಆವರಣದ ಒಂದು ಮೂಲೆಯಲ್ಲೇ ಕುಳಿತುಕೊಂಡಿದ್ದಾನೆ. ಬೆಳಿಗ್ಗೆ ಭದ್ರತಾ ಸಿಬ್ಬಂದಿ ಗಸ್ತು ತಿರುಗುವ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಈ ಬಗ್ಗೆ ಕೂಡಲೇ ಕಾಳಿಘಾಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವನನ್ನು ಬಂಧಿಸಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೇ ಸಿಟಿ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಸೇರಿದಂತೆ ಕೋಲ್ಕತ್ತಾ ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ, ತನಿಖೆ ಮುಂದುವರೆಸಿದ್ದಾರೆ.

ಈ ಘಟನೆಯು ಸಿಎಂ ಅವರ ಖಾಸಗಿ ನಿವಾಸವನ್ನು ಕಾವಲು ಕಾಯುವ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಹೇಗೆ ದಾಟಿದೆ ಎಂಬ ಪ್ರಶ್ನೆಗಳು ಉದ್ಭವವಾಗಿವೆ.
ತನಿಖಾಧಿಕಾರಿಗಳು ಉಲ್ಲಂಘನೆಯ ಹಿಂದಿನ ಸಂಭವನೀಯ ಉದ್ದೇಶಗಳನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ. ಆದಾಗ್ಯೂ, ಪ್ರಾಥಮಿಕ ತನಿಖೆಯು ಈ ವ್ಯಕ್ತಿಯನ್ನು ಕಳ್ಳ ಅಥವಾ “ಅಸ್ವಸ್ಥ ಮಾನಸಿಕ ಸ್ಥಿತಿ” ಹೊಂದಿರುವ ವ್ಯಕ್ತಿ ಎಂದು ಸೂಚಿಸುತ್ತದೆ. ಆದರೆ, ಪೊಲೀಸರು ಇನ್ನೂ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ನಾವು ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದೇವೆ. ಉದ್ದೇಶಪೂರ್ವಕವಾಗಿ ಸಿಎಂ ನಿವಾಸಕ್ಕೆ ಪ್ರವೇಶಿಸಲು ಯಾರಾದರೂ ಸೂಚಿಸಿದ್ದಾರೆಯೇ ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಹಾರಾಷ್ಟ್ರ; ಕೇವಲ 6 ತಿಂಗಳಲ್ಲೇ ಶಿಂಧೆ ಸರ್ಕಾರ ಪತನವಾಗೋದು ಪಕ್ಕಾ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್

ಇಂದು ‘ವಿಧಾನಪರಿಷತ್’ನ ಮೂವರು ಸದಸ್ಯರು ನಿವೃತ್ತಿ

Share.
Exit mobile version