ಬೆಂಗಳೂರು : ಬೆಂಗಳೂರಿನ ಜನರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು ಎಲ್ಲೆಂದರಲ್ಲಿ ಕಸ ಬೀಸಾಡಿದರೆ ಬಿಬಿಎಂಪಿ 500 ರೂಪಾಯಿ ದಂಡ ವಿಧಿಸಿ ಕ್ರಮಕ್ಕೆ ಮುಂದಾಗಿದೆ,  ಈ ಕುರಿತಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರೀನಾಥ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಇಷ್ಟು ದಿನ 50 ರೂಪಾಯಿ ಇದ್ದ ದಂಡದ ಮೊತ್ತ 500ಕ್ಕೆ ಹೆಚ್ಚಿಸಲು ಇದೀಗ ಆಯುಕ್ತರು ಸೂಚನೆ ನೀಡಿದ್ದಾರೆ. ನಗರದ 7 ಜೋನ್ ಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿದೆ ಕಳೆದ 24 ಗಂಟೆಗಳಲ್ಲಿ ಬೆಂಗಳೂರ ನಗರದಲ್ಲಿ 153 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ.ಹಾಗಾಗಿ ಬೆಂಗಳೂರಿನಲ್ಲಿ  ಸದ್ಯ 547ಕ್ಕೆ ಪ್ರಕರಣಗಳು ಏರಿಕೆ ಕಂಡಿವೆ. ಹಾಗಾಗಿ ಎಲ್ಲೆಂದರಲ್ಲಿ ಕಸ ಬಿಸಾಡಿದರೆ 500 ರೂಪಾಯಿ ದಂಡ ವಿಧಿಸುವಂತೆ ಆಯುಕ್ತ ತುಷಾರ ಗಿರಿನಾಥ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

Share.
Exit mobile version